ವಿದೇಶ

ಮರಣದಂಡನೆ ವಿರುದ್ಧ ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಕುಲಭೂಷಣ್ ಜಾಧವ್ ನಕಾರ: ಪಾಕಿಸ್ತಾನ ಪ್ರತಿಪಾದನೆ

Raghavendra Adiga

ಇಸ್ಲಾಮಾಬಾದ್: 2017 ರ ಏಪ್ರಿಲ್‌ನಲ್ಲಿ "ಗೂಢಚರ್ಯೆ ಹಾಗೂ ಭಯೋತ್ಪಾದನೆ" ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಮೂಲದ  ಕುಲಭೂಷಣ್ ಜಾಧವ್, ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ನಿರಾಕರಿಸಿದ್ದು ಇದಾಗಲೇ ಬಾಕಿ ಇರುವ ಅವರ ಕ್ಷಮಾದಾನ ಅರ್ಜಿಯೊಡನೆ ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.

"ಜಾಧವ್ ತಾವು ಇದಾಗಲೇ ಬಾಕಿ ಇರುವ ಕ್ಷಮಾದಾನ ಅರ್ಜಿಯೊಂದಿಗೇ ಮುಂದುವರಿಯಲು ತೀರ್ಮಾನಿಸಿದ್ದಾರೆ.ಪಾಕಿಸ್ತಾನವು ಅವರಿಗೆ ಎರಡನೇ ಕಾನ್ಸುಲರ್ ಎಂಟ್ರಿ ನೀಡಿದೆ" ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಇಸ್ಲಾಮಾಬಾದ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಹೇಳಿದ್ದಾರೆ. 

ಜೂನ್ 17, 2020 ರಂದು, ಭಾರತೀಯ ಮೂಲದ ಜಾಧವ್ ಅವರ ಶಿಕ್ಷೆ ಮತ್ತು ಅಪರಾಧದ ಪರಿಶೀಲನೆ ಸಂಬಂಧ ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿತ್ತು, ತನ್ನ ಕಾನೂನುಬದ್ಧ ಹಕ್ಕನ್ನು ಚಲಾಯಿಸಿ ಅವರು ತಮ್ಮ ಶಿಕ್ಷೆ ಮತ್ತು ಅಪರಾಧದ ಪರಿಶೀಲಗಾಗಿ ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದರು ಎಂದು ಹೆಚ್ಚುವರಿ ಅಟಾರ್ನಿ ಜನರಲ್ ಹೇಳಿದರು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದೆ ಎಂದು ಈ ವಿಷಯದ ಬಗ್ಗೆ ತಿಳಿಇದಿರುವ ಮೂಲಗಳು ಮೇ ತಿಂಗಳಲ್ಲಿ ಎಎನ್‌ಐಗೆ ತಿಳಿಸಿವೆ. "ಕಳೆದ ವರ್ಷ ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿದೆ. . ಐಸಿಜೆ ನಿರ್ಧಾರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಸೆಪ್ಟೆಂಬರ್ 2 ರಂದು ಪಾಕಿಸ್ತಾನಲ್ಲಿ  ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರು ಜಾಧವ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಭೇಟಿಯಾಗಿದ್ದರು. ಇದಕ್ಕೆ ಮುನ್ನ ಅಂತರ್ಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನಕ್ಕೆ ಜಾಧವ್ ಮರಣದಂಡನೆ ತೀರ್ಪನ್ನು ಮರುಪರಿಶೀಲಿಸಿಅಲು ಆದೇಶಿಸಿತ್ತು.

ಜಾದವ್ ಅವರನ್ನು ಇರಾನ್‌ನಿಂದ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಮಾರ್ಚ್ 3, 2016 ರಂದು ಬಲೂಚಿಸ್ತಾನದಿಂದ ಪಾಕಿಸ್ತಾನದ ಭದ್ರತಾ ಪಡೆಗಳು ಬಂಧಿಸಿದ್ದವು.ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಜಾಧವ್ ಭಾಗಿಯಾಗಿರುವ ಬಗ್ಗೆ ಪಾಕಿಸ್ತಾನದ ಆರೋಪವನ್ನು ಭಾರತ ತಿರಸ್ಕರಿಸಿದೆ. 

SCROLL FOR NEXT