ವಿದೇಶ

ಇಸ್ಲಾಮಾಬಾದಿನಲ್ಲಿ 'ಕೃಷ್ಣ'ದೇವಾಲಯ ನಿರ್ಮಾಣ: ಇಸ್ಲಾಮಿಕ್ ಸಂಘಟನೆಯ ಸಲಹೆ ಕೋರಿದ ಪಾಕ್ ಸಚಿವಾಲಯ

Nagaraja AB

ಇಸ್ಲಾಮಾಬಾದ್:  ಕೆಲ ಮುಸ್ಲಿಂ ಗುಂಪುಗಳ ವಿರೋಧದ ನಡುವೆ ರಾಜಧಾನಿ ಇಸ್ಲಾಮಾಬಾದಿನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಧನ ಸಹಾಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸುವಂತೆ ಇಸ್ಲಾಮಿಕ್ ಸಂಘಟನೆಗೆ ಪಾಕಿಸ್ತಾನ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಪತ್ರ ಬರೆದಿರುವುದಾಗಿ ಮಾಧ್ಯಮವೊಂದು ಇಂದು ವರದಿ ಮಾಡಿದೆ.

ಇಸ್ಲಾಮಾಬಾದಿನ ಆಡಳಿತ್ಮಾಕ ವಿಭಾಗದಲ್ಲಿನ 20 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೃಷ್ಣ ದೇವಾಲಯವನ್ನು ಸ್ಥಾಪಿಸಲಾಗುತ್ತಿದೆ.ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆ ಇಲ್ಲ, ಆದರೆ, ಸಾರ್ವಜನಿಕ ಹಣದಲ್ಲಿ ದೇವಾಲಯ ನಿರ್ಮಾಣ ಬೇಕೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂದು ಪಾಕಿಸ್ತಾನ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್  ಕ್ವಾದ್ರಿ ಹೇಳಿದ್ದಾರೆ.

ದೇವಾಲಯ ನಿರ್ಮಾಣಕ್ಕಾಗಿ ಪಾಕಿಸ್ತಾನ ಸರ್ಕಾರ 10 ಕೋಟಿ ಮಂಜೂರು ಮಾಡಿದೆ. ಈ ವಿವಾದವನ್ನು ಕ್ವಾದ್ರಿ ಇದೀಗ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿಗೆ ವರ್ಗಾಯಿಸಿದ್ದಾರೆ ಎಂದು ಡಾನ್ ನಿಯತಕಾಲಿಕೆ ವರದಿ ಮಾಡಿದೆ.

ಇಸ್ಲಾಮಿಕ್ ವಿವಾದಗಳಿಗೆ ಸಂಬಂಧಿಸಿದಂತೆ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ- ಸಿಐಐ ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ಮಾಡುತ್ತದೆ. ಸರ್ಕಾರದ ಹಣದಲ್ಲಿ ದೇವಾಲಯ ನಿರ್ಮಾಣ ಸಂಬಂಧ ಅಭಿಪ್ರಾಯ ತಿಳಿಸುವಂತೆ ಕ್ವಾದ್ರಿ ಪತ್ರದಲ್ಲಿ ತಿಳಿಸಿದ್ದಾರೆ.

ಇಸ್ಲಾಮಾಬಾದಿನ ಹಿಂದೂ ಪಂಚಾಯತ್ ಮತ್ತು ಮುಸ್ಲಿಂ ಯೇತರ ಸಂಸದರು ತಮ್ಮನ್ನು ಭೇಟಿ ಮಾಡಿ ಸರ್ಕಾರದ ಹಣದಲ್ಲಿ ದೇವಾಲಯ ನಿರ್ಮಾಣ ಮಾಡುವಂತೆ ತಿಳಿಸಿರುವುದಾಗಿ ಪತ್ರದಲ್ಲಿ ಕ್ವಾದ್ರಿ ಹೇಳಿದ್ದಾರೆ.

ಪಾಕ್ ಧಾರ್ಮಿಕ ವ್ಯವಹಾರಗಳ ಸಚಿವಾಲಯದಿಂದ ಪತ್ರ ಬಂದಿರುವುದನ್ನು ಒಪ್ಪಿಕೊಂಡಿರುವ ಸಿಐಐ ಮುಖ್ಯಸ್ಥ ಕಿಬ್ಲಾ ಅಯಾಜ್
ಈ ವಿಚಾರದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ, ಧಾರ್ಮಿಕ ಮುಖಂಡರು ಸಿಐಐಗೆ ಸೂಕ್ತ ಸಲಹೆ ನೀಡಬೇಕು ಎಂದಿದ್ದಾರೆ.

SCROLL FOR NEXT