ಸಾಂದರ್ಭಿಕ ಚಿತ್ರ 
ವಿದೇಶ

ಕೊರೋನಾಗಿಂತಲೂ ಮಾರಣಾಂತಿಕ ವೈರಸ್ ಕಜಕಿಸ್ತಾನದಲ್ಲಿ ಜನ್ಮ ತಾಳಿದೆ: ವಿಶ್ವಕ್ಕೆ ಚೀನಾ ಎಚ್ಚರಿಕೆ

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ.

ಬೀಜಿಂಗ್: ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ.

ಹೌದು.. ಕೊರೋನಾಗಿಂತಲೂ ಅಪಾಯಕಾರಿ ಮತ್ತು ಪ್ರಾಣಾಂತಕ ವೈರಸ್ ವೊಂದು ಜನ್ಮತಾಳಿದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕಜಕಿಸ್ತಾನದಲ್ಲಿ ಈ ಅನಾಮಧೇಯ ಮತ್ತು ಪ್ರಾಣಾಂತಕ ವೈರಸ್ ಜನ್ಮ ತಾಳಿದ್ದು ಕಳೆದ 6 ತಿಂಗಳಲ್ಲಿ ಈ ವೈರಸ್ ಗೆ ಆ ದೇಶದಲ್ಲಿ  1,772 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಜೂನ್ ತಿಂಗಳೊಂದರಲ್ಲಿಯೇ 628 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೆಂಟ್ರಲ್ ಏಷ್ಯಾದ ಚೀನಾದ ರಾಯಭಾರ ಕಚೇರಿ ಹೇಳಿದೆ.

ಈ ಬಗ್ಗೆ ವಿ-ಚಾಟ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ರಾಯಭಾರ ಕಚೇರಿ, ಕಜಕಿಸ್ಥಾನದಲ್ಲಿ ಈ ವೈರಸ್ ಗೆ ಬಲಿಯಾದವರ ಪೈಕಿ ಚೀನಾ ದೇಶದ ನಿವಾಸಿಗಳು ಕೂಡ ಇದ್ದಾರೆ. ಪ್ರಸ್ತುತ ಪತ್ತೆಯಾಗಿರುವ ಈ ಅನಾಮಧೇಯ ವೈರಸ್ ನ ಜೀವಹಾನಿ ಪ್ರಮಾಣ ಕೋವಿಡ್-19ಗಿಂತಲೂ ಹೆಚ್ಚಾಗಿದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಪ್ರಸ್ತುತ ಈ ನಿಗೂಢ ಮತ್ತು ಅನಾಮಧೇಯ ವೈರಸ್ ಕುರಿತಂತೆ ಜಗತ್ತಿನ ಸಾಕಷ್ಟು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ಕಜಕಿಸ್ತಾನ ಆರೋಗ್ಯ ಇಲಾಖೆ ಅಧ್ಯಯನ ನಡೆಸುತ್ತಿದ್ದು, ಇದು ಕೊರೋನಾ ವೈರಸ್ ನ ರೂಪಾಂತರವೇ ಅಥವಾ ಇದೇ ಬೇರೆ ಜಾತಿಯ ವೈರಸ್ ಆಗಿರಬಹುದೇ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.  ಕಜಕಿಸ್ತಾನದಲ್ಲಿರುವ ಈ ವೈರಸ್ ಜಗತ್ತಿನ ಇತರೆ ದೇಶಗಳಿಗೆ ವ್ಯಾಪಿಸದಂತೆ ತುರ್ತು ಕ್ರಮ ಕೈಗೊಳ್ಳಬೇಕಿದ್ದು, ಇದೇ ಕಾರಣಕ್ಕೆ ಚೀನಾ ತನ್ನ ವಾಯುವ್ಯ ಭಾಗದ ಚೀನಾ-ಕಜಕಿಸ್ತಾನ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಕಜಕಿಸ್ತಾನದಲ್ಲಿರುವ ರಾಯಭಾರ ಕಚೇರಿ ಈ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದ್ದು, ಈ ಅನಾಮಧೇಯ ವೈರಸ್ ನ ಪ್ರಸರಣವನ್ನು ಈ ಕೂಡಲೇ ತಡೆಯಬೇಕಿದೆ ಎಂದು ಹೇಳಿದೆ. 

ಇನ್ನು ಇದೇ ವಿಚಾರವಾಗಿ ಕಜಕಿಸ್ಥಾನದ ಸ್ಥಳೀಯ ಮಾಧ್ಯಮಗಳೂ ಕೂಡ ವರದಿ ಮಾಡಿದ್ದು, ಜೂನ್ ತಿಂಗಳ ಮಧ್ಯಭಾಗದಲ್ಲೇ 500ಕ್ಕೂ ಅಧಿಕ ಮಂದಿ ಈ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. 

ಇತ್ತ ಕಜಕಿಸ್ತಾನ ಆರೋಗ್ಯ ಸಚಿವರು ಮಾತನಾಡಿ ಕೋವಿಡ್-19ಗೆ ಹೋಲಿಕೆ ಮಾಡಿದರೆ ಈ ಅನಾಮಾಧೇಯ ವೈರಸ್ ಗೆ ತುತ್ತಾಗುತ್ತಿರುವವರ ಪ್ರಮಾಣ 2ರಿಂದ ಮೂರು ಪಟ್ಟು ಅಧಿಕವಾಗಿದೆ. ಮುಂದಿನವಾರದಿಂದ ಕೊರೋನಾ ವೈರಸ್ ನಂತೆಯೇ ಈ ನಿಗೂಢ ವೈರಸ್ ಗೆ ತುತ್ತಾದವರ ಮತ್ತು ಬಲಿಯಾದವ ಅಂಕಿ ಅಂಶಗಳನ್ನು ಮಾಧ್ಯಮಗಳಿಗೆ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಪ್ರಸ್ತುತ ಈ ವೈರಸ್ ನ ಸ್ಥಿತಿಗತಿ ತಿಳಿಯುವ ಕುರಿತು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ ಎಂದು ಕಜಕಿಸ್ತಾನದ ಪ್ರಮುಖ ಸುದ್ದಿಸಂಸ್ಥೆ ಕಜಿನ್ ಫಾರ್ಮ್ ವರದಿ ಮಾಡಿದೆ.

ಇನ್ನು ಕಜಕಿಸ್ತಾನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 51,059ಕ್ಕೆ ಏರಿಕೆಯಾಗಿದ್ದು, ಈ ಪೈಕಿ 264 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT