ವಿದೇಶ

ಇಸ್ಲಾಮಾಬಾದ್ ನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ: ಪಾಕ್ ಉಲೇಮಾ ಕೌನ್ಸಿಲ್ ಬೆಂಬಲ

Lingaraj Badiger

ಇಸ್ಲಾಮಬಾದ್: ಇಸ್ಲಾಮಾಬಾದ್ ನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣಕ್ಕೆ ಪಾಕಿಸ್ತಾನ ಉಲೇಮಾ ಕೌನ್ಸಿಲ್ (ಪಿಯುಸಿ) ತನ್ನ ಬೆಂಬಲ ವ್ಯಕ್ತಪಡಿಸಿದೆ. ದೇಗುಲ ನಿರ್ಮಾಣವನ್ನು ವಿವಾದಾಸ್ಪದಗೊಳಿಸುವುದು ತಪ್ಪು ಎಂದು ಎಂದು ಅದು ಅಭಿಪ್ರಾಯವ್ಯಕ್ತಪಡಿಸಿದೆ.

ದೇಗುಲ ನಿರ್ಮಾಣ ಕುರಿತಂತೆ ವಿವಾದ ಸೃಷ್ಟಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತೀವ್ರವಾದಿ ಧರ್ಮ ಗುರುಗಳ ನಿಲುವು ಸರಿಯಾದುದಲ್ಲ. ಪಾಕಿಸ್ತಾನ ಉಲೇಮಾ ಕೌನ್ಸಿಲ್ ಈ ಸಂಬಂಧ ಸಭೆಯೊಂದನ್ನು ಕರೆದು ಇಸ್ಲಾಮಿಕ್ ಚಿಂತನೆಗಳ ಮಂಡಳಿಯ ವಿಚಾರಗಳನ್ನು ವಿವರಿಸಲಾಗುವುದು ಎಂದು ಪಿಯುಸಿ ಅಧ್ಯಕ್ಷ ಹಫಿಜ್ ಮೊಹಮದ್ ತಾಹಿರ್ ಮೆಹಮೂದ್ ಆಶ್ರಫಿ ಹೇಳಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ಸಂವಿಧಾನ ದೇಶದಲ್ಲಿ ವಾಸವಾಗಿರುವ ಮುಸ್ಲಿಮರು ಹಾಗೂ ಮುಸ್ಲಿಮೇತರರ ಹಕ್ಕುಗಳನ್ನು ಸ್ಪಷ್ಟವಾಗಿ ನಿರೂಪಿಸಿದೆ ಎಂದು ಆಶ್ರಫಿ ವಿವರಿಸಿದ್ದಾರೆ.

ಪಾಕಿಸ್ತಾನ ಸಂವಿಧಾನ ಹಾಗೂ ಷರಿಯಾದಡಿ ಮುಸ್ಲಿಮೇತರರು ತಮ್ಮದೇ ಪೂಜಾ ಸ್ಥಳಗಳನ್ನು ಹೊಂದಲು ಹಕ್ಕು ಹೊಂದಿದ್ದಾರೆ. ಆದರೆ ದೇಗುಲ ನಿರ್ಮಾಣವನ್ನು ವಿರೋಧಿಸುವವರು ಷರಿಯಾ ಕಾನೂನನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಅಶ್ರಫಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT