ವಿದೇಶ

ಅಮೆರಿಕ ನ್ಯಾಟೋದಿಂದ ಹಿಂದೆ ಸರಿಯಲು ಬಯಸುವುದಿಲ್ಲ: ಟ್ರಂಪ್

Raghavendra Adiga

ಮಾಸ್ಕೋ:  ಅಮೆರಿಕ ನ್ಯಾಟೋವನ್ನು ತೊರೆಯುವುದನ್ನು ಬಯಸುವುದಿಲ್ಲ. ಆದರೆ, ಮಿತ್ರರಾಷ್ಟ್ರಗಳು ತಮ್ಮ ಕೊಡುಗೆಗಳನ್ನು ಪಾವತಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತಭವನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತಮ್ಮ ಇತ್ತೀಚಿನ ಪುಸ್ತಕ "ದಿ ರೂಮ್ ವೇರ್ ಇಟ್ ಹ್ಯಾಪನ್ಡ್" ನಲ್ಲಿ 2018 ರ ಶೃಂಗಸಭೆಯಲ್ಲಿ ನ್ಯಾಟೋ ನಾಯಕರನ್ನು ಬೆದರಿಕೆ ಹಾಕಲು ಟ್ರಂಪ್ ಬಯಸಿದ್ದರು ಎಂದು ಉಲ್ಲೇಖಿಸಿದ್ದರು. ಈ ಕುರಿತು 
ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಸ್ಪಷ್ಟನೆ ನೀಡಿದ್ದಾರೆ. 

ತಮ್ಮ ಪುಸ್ತಕದಲ್ಲಿ ಜಾನ್ ಬೋಲ್ಟನ್, ಟ್ರಂಪ್ ಇತರ ದೇಶಗಳ ಮೇಲೆ ಬೆದರಿಕೆಯೊಡ್ಡಿದ್ದು, ಶೇ.2ರಷ್ಟು ಕೊಡಗೆ ಪಾವತಿಸದಿದ್ದಲ್ಲಿ ಅಮೆರಿಕ ಮೈತ್ರಿಕೂಟದಿಂದ ಹಿಂದೆ ಸರಿಯುತ್ತದೆ ಎಂದಿದ್ದರು. 

ತಾವು ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಟ್ರಂಪ್ ಅವರನ್ನು ಬಣದಲ್ಲಿ ಉಳಿಯುವಂತೆ ಹಾಗೂ ಅಗತ್ಯಬಿದ್ದಲ್ಲಿ ದೇಶದ ಕೊಡುಗೆಯನ್ನು ಕಡಿಮೆಗೊಳಿಸುವಂತೆ ಮನವೊಲಿಸಲು ನಿರ್ಧರಿಸಿದ್ದೆವು. ತಮ್ಮ ಸಲಹೆಯಂತೆ ಟ್ರಂಪ್ ನ್ಯಾಟೋಗೆ ಬೆಂಬಲ ಘೋಷಿಸಿದರು. ಆದರೆ ಸಣ್ಣ ರಕ್ಷಣಾ ಬಜೆಟ್ ಹೊಂದಿರುವ ಸದಸ್ಯ ರಾಷ್ಟ್ರಗಳನ್ನು ಟೀಕಿಸಿದ್ದರು ಎಂದಿದ್ದಾರೆ. ಅಮೆರಿಕ ನಿಜವಾಗಿಯೂ ನ್ಯಾಟೋದಿಂದ ನಿರ್ಗಮಿಸಲು ಬಯಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ತಾವು ನ್ಯಾಟೋ ಬಿಡಲು ಬಯಸುವುದಿಲ್ಲ. ಆದರೆ ಅವರು ತಮ್ಮ ನ್ಯಾಯಯುತ ಪಾಲನ್ನು ಪಾವತಿಸಬೇಕೆಂದು ಬಯಸುತ್ತೇವೆ ಎಂದಿದ್ದಾರೆ. ಜೊತೆಗೆ, ಜಿಡಿಪಿಯ ಶೇ.2 ರಷ್ಟು ಕೊಡುಗೆ "ತೀರಾ ಕಡಿಮೆ" ಎಂದು ವಾದಿಸಿದ್ದಾರೆ.

SCROLL FOR NEXT