ಭಾರತದಲ್ಲಿ ಬಡತನ 
ವಿದೇಶ

27.3 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರಕ್ಕೆ: ಭಾರತದ ಕ್ರಮಕ್ಕೆ ವಿಶ್ವಸಂಸ್ಥೆ ಶ್ಲಾಘನೆ

2005-06 ರಿಂದ 2015-16ರ ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು 27.3 ಕೋಟಿ ಭಾರತೀಯ ನಾಗರಿಕರು ಬಡತನ ರೇಖೆಯಿಂದ ಹೊರಬಂದಿದ್ದು, ಇದೊಂದು ಗಮನಾರ್ಹ ಸುಧಾರಣೆ ಎಂದು ವಿಶ್ವಸಂಸ್ಥೆ ಭಾರತದ ಕ್ರಮಗಳನ್ನು ಶ್ಲಾಘಿಸಿದೆ.

ವಾಷಿಂಗ್ಟನ್: 2005-06 ರಿಂದ 2015-16ರ ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು 27.3 ಕೋಟಿ ಭಾರತೀಯ ನಾಗರಿಕರು ಬಡತನ ರೇಖೆಯಿಂದ ಹೊರಬಂದಿದ್ದು, ಇದೊಂದು ಗಮನಾರ್ಹ ಸುಧಾರಣೆ ಎಂದು ವಿಶ್ವಸಂಸ್ಥೆ ಭಾರತದ ಕ್ರಮಗಳನ್ನು ಶ್ಲಾಘಿಸಿದೆ.

ವಿಶ್ವಸಂಸ್ಥೆಯ ಯುನೈಟೆಡ್‌ ನೇಷನ್ಸ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ (ಯುಎನ್‌ಡಿಪಿ) ಹಾಗೂ ಆಕ್ಸ್‌ಫರ್ಡ್‌ ಪಾವರ್ಟಿ ಆ್ಯಂಡ್‌ ಹ್ಯೂಮನ್‌ ಡೆವಲಪ್‌ಮೆಂಟ್‌ ಇನಿಷಿಯೇಟಿವ್‌ ಈ ಸಮೀಕ್ಷೆ ನಡೆಸಿದ್ದು, ಬಡತನ ಪ್ರಧಾನ ಸಮಸ್ಯೆಯಾಗಿದ್ದ ಸುಮಾರು 75 ದೇಶಗಳ ಪೈಕಿ 65 ದೇಶಗಳಲ್ಲಿ ಬಡತನ ಸುಧಾರಣೆ ಕಂಡಿದೆ.  2000ರಿಂದ 2019ರ ಅವಧಿಯಲ್ಲಿ ಬಹು ಆಯಾಮದ ಬಡತನದಿಂದ ಸುಧಾರಣೆ ಕಂಡಿವೆ ಎಂದು ಹೇಳಿದೆ.

ಅನಾರೋಗ್ಯ ಸಮಸ್ಯೆ, ಶಿಕ್ಷಣದ ಕೊರತೆ, ಉತ್ತಮ ನೌಕರಿಯ ಅಲಭ್ಯತೆ, ದೌರ್ಜನ್ಯದ ಬೆದರಿಕೆ, ಅಪಾಯಕಾರಿ ಪರಿಸರದಲ್ಲಿ ಜೀವನ ಇತ್ಯಾದಿ ಸಮಸ್ಯೆಗಳಿಂದ ಭಾರತೀಯರು ಹೊರ ಬಂದಿದ್ದಾರೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಬಡತನದಲ್ಲಿ ಬಳಲುತ್ತಿರುವ ರಾಷ್ಟ್ರಗಳಲ್ಲಿ ಪೈಕಿ ಭಾರತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕಾರಣ 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕಂಡು ಬಂದಿರುವ ಸುಧಾರಣೆ ಚಾರಿತ್ರಿಕವಾಗಿದೆ. ಭಾರತದಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ 27.3 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಭಾರತ, ಅರ್ಮೇನಿಯಾ, ನಿಕಾರಗುವಾ, ನಾರ್ತ್‌ ಮೆಸೆಡೊನಿಯಾ- ಈ ನಾಲ್ಕು ದೇಶಗಳು ಬಡತನ ನಿರ್ಮೂಲನೆ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಈ ನಾಲ್ಕು ದೇಶಗಳು ಜಾಗತಿಕ ಜನಸಂಖ್ಯೆಯ ಐದನೇ ಒಂದರಷ್ಟು ಜನಸಂಖ್ಯೆ ಹೊಂದಿವೆ. ಭಾರತ ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವುದು ಅದಕ್ಕೆ ಕಾರಣ. ಬಹುಆಯಾಮದ ಬಡತನ ನಿರ್ಮೂಲನೆಯಲ್ಲಿಯೂ ಈ ದೇಶಗಳು ಜಾಗತಿಕ ಮಾದರಿಯಾಗಿವೆ ಎಂದು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂತೆಯೇ ಬಹುತೇಕ ದೇಶಗಳಲ್ಲಿಅಪೌಷ್ಟಿಕತೆಯಿಂದ ಬಳಲುವ ಜನರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ

ಕೊರೊನಾ ಬಳಿಕದ ಮಾಹಿತಿಯಿಲ್ಲ
ಇನ್ನು ವಿಶ್ವಸಂಸ್ಥೆಯ ವರದಿ 2000ರಿಂದ 2019ರ ಅವಧಿಯಲ್ಲಿನ ವರದಿಯಾಗಿದ್ದು, 2019 ಅಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಸಾಂಕ್ರಾಮಿಕದ ಬಳಿಕದ ಕುರಿತು ಮಾಹಿತಿ ಇಲ್ಲ. ಕೋವಿಡ್‌-19 ವೈರಸ್‌ ಬಾಧಿಸಲು ಆರಂಭಿಸಿದ ಬಳಿಕ ಜಾಗತಿಕವಾಗಿ ಬಡತನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಆ ಕುರಿತ ಅಂಕಿ ಅಂಶಗಳು ಇನ್ನೂ ಲಭ್ಯವಾಗಿಲ್ಲ. ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಿಂಜರಿತ ಉಂಟಾಗಿರುವುದರಿಂದ ಬಡತನದ ಪ್ರಮಾಣವೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT