ವಿದೇಶ

ಅರ್ಮೇನಿಯಾ ಪ್ರಧಾನಿ, ಅವರ ಕುಟುಂಬಕ್ಕೂ ಬಂತು ಕೊರೋನಾ!

Raghavendra Adiga

ಯೆರೇವನ್: ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಮತ್ತು ಅವರ ಇಡೀ ಕುಟುಂಬಕ್ಕೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

ಪಶಿನಿಯನ್ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ, ಆದರೆ ಮಿಲಿಟರಿ ತಾಣಗಳಿಗೆ ಭೇಟಿ ನೀಡುವ ಮೊದಲು ಪರೀಕ್ಷಿಸಲು ನಿರ್ಧರಿಸಲಾಗಿದ್ದು ಆ ಪರೀಕ್ಷೆಯಲ್ಲಿ ಧನಾತ್ಮಕ ವರದಿ ಬಂದಿದೆ ಎಂದು ಪಶಿನಿಯನ್ ಸೋಮವಾರ ಫೇಸ್‌ಬುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ನಾನು ಮನೆಯಿಂದ ಕೆಲಸ ಮಾಡುತ್ತೇನೆ' ಎಂದು ಪ್ರಧಾನಿ ಹೇಳಿದ್ದು ಅವರ ಸಭೆಗೆ ಕೈಗವಸುಗಳನ್ನು ಧರಿಸದೆ ನೀರಿನ ಗ್ಲಾಸ್ ತಂದಿದ್ದ ಯುವಕನಿಂದ ಗ್ಲಾಸ್ ನೀರನ್ನು ಪಡೆದು ಕುಡಿದ ಕಾರಣ ಸೋಂಕು ಬಂದಿರಬಹುದು ಎನ್ನಲಾಗಿದೆ.

ಅರ್ಮೇನಿಯಾದಲ್ಲಿ ಇದುವರೆಗೆ  9,000 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದೆ.  ಸುಮಾರು 130 ಮಂದಿ ಸಾವಿಗೀಡಾಗಿದ್ದಾರೆ. ರಾಷ್ಟ್ರದಲ್ಲಿ ಮಾರ್ಚ್ ಮಧ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
 

SCROLL FOR NEXT