ಅಮೆರಿಕಾದಲ್ಲಿ ಪ್ರತಿಭಟನೆ 
ವಿದೇಶ

ಕಪ್ಪು ವರ್ಣೀಯನ ಹತ್ಯೆ: ಅಮೆರಿಕಾದಲ್ಲಿ ವ್ಯಾಪಕ ಹಿಂಸಾಚಾರ, ದುಷ್ಕರ್ಮಿಗಳಿಂದ ಸಿಕ್ಕ ಸಿಕ್ಕ ಅಂಗಡಿ ಲೂಟಿ

ಕಪ್ಪು ವರ್ಣೀಯ ವ್ಯಕ್ತಿ ಫ್ಲೋಯ್ಡ್ ಸಾವು ಖಂಡಿಸಿ ಅಮೆರಿಕಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆ ಜೊತೆಗೆ ಭಾರಿ ಪ್ರಮಾಣದ ಹಿಂಸಾಚಾರ, ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ಲೂಟಿ ತಡೆಯಲು ಬಂದವರ ಹತ್ಯೆಯಂತಹ ಘಟನೆಗಲು ನಡೆದಿದ್ದು, ಅಮೆರಿಕಾದ ಹಲವು ನಗರಗಳು ಅಗ್ನಿಕುಂಡದಂತೆ ಮಾರ್ಪಟ್ಟಿವೆ. 

ವಾಷಿಂಗ್ಟನ್: ಕಪ್ಪು ವರ್ಣೀಯ ವ್ಯಕ್ತಿ ಫ್ಲೋಯ್ಡ್ ಸಾವು ಖಂಡಿಸಿ ಅಮೆರಿಕಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆ ಜೊತೆಗೆ ಭಾರಿ ಪ್ರಮಾಣದ ಹಿಂಸಾಚಾರ, ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ಲೂಟಿ ತಡೆಯಲು ಬಂದವರ ಹತ್ಯೆಯಂತಹ ಘಟನೆಗಲು ನಡೆದಿದ್ದು, ಅಮೆರಿಕಾದ ಹಲವು ನಗರಗಳು ಅಗ್ನಿಕುಂಡದಂತೆ ಮಾರ್ಪಟ್ಟಿವೆ.   

ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಅಲ್ಲಿನ ಸರ್ಕಾರ ಹಲವಡೆಗೆ ಕರ್ಫ್ಯೂ ಜಾರಿ ಮಾಡಿದ್ದು, ಕರ್ಫ್ಯೂ ಉಲ್ಲಂಘಿಸಿ 30ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದರ ನಡುವೆ ದೊಡ್ಡ ದೊಡ್ಡ ಮಾಲ್ ಗಳಲ್ಲಿನ ಪ್ರಸಿದ್ಧ ಬ್ರಾಂಡ್ ಸ್ಟೋರ್ ಗಳಲ್ಲಿ ಲೂಟಿಯಂತ ಕೃತ್ಯಗಳೂ ಭಾರೀ ಪ್ರಮಾಣದಲ್ಲಿ ನಡೆದಿವೆ. 

ಡಲ್ಲಾಸ್ ನಲ್ಲಿ ಮಳಿಗೆಯೊಂದನ್ನು ಲೂಟಿ ಮಾಡಿದ ಗುಂಪೊಂದು ಅದನ್ನು ತಡೆಯಲು ಬಂದ ಅಂಗಡಿ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಇನ್ನು ವಾಷಿಂಗ್ಟನ್ ಡಿಸಿಯಲ್ಲಿನ ಐಫೋನ್ ಮಳಿಗೆಯನ್ನು ದುಷ್ಕರ್ಮಿಗಳ ಗುಂಪು ಕೆಲವೇ ನಿಮಿಷಗಳಲ್ಲಿ ಲೂಟಿ ಮಾಡಿಕೊಂಡು ಪರಾರಿಯಾಗಿದೆ. ಇನ್ನು ಎರಡು ಪ್ರಕರಣಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. 

ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರದ ದೃಶ್ಯಗಳ ವರದಿಗೆ ಹೋಗಿದ್ದ ಪತ್ರಕರ್ತರ ಮೇಲೂ ದಾಳಿ ನಡೆಸಲಾಗಿದೆ. ಇನ್ನು ಲಾಸ್ ಏಂಜಲೀಸ್ ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾರಿಸಿದ ರಬ್ಬರ್ ಗುಂಡು, ಖ್ಯಾತ ನಟ ಕೆಂಡ್ರಿಕ್ ಸ್ಯಾಂಪ್ಸನ್'ಗೆ ತಗುಲಿದ ಘಟನೆಯೂ ನಡೆದಿದೆ.
 
ಹಿಂಸಾಚಾರ ತಡೆಯಲು ಹಲವು ಪ್ರದೇಶಗಳಲ್ಲಿ ನ್ಯಾಷನಲ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ. ಈ ವರೆಗೆ ಹಿಂಸೆಯಲ್ಲಿ ತೊಡಗಿದ್ದ 1500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಫೋಯ್ಜ್ ಹತ್ಯೆಗೆ ಕಾರಣವೆಂಬ ಆರೋಪ ಹೊತ್ತಿರುವ ಡೆರಿಕ್ ಚುವಿನ್ ಬಂಧನದ ಬೆನ್ನಲ್ಲೇ, ಘಟನೆ ನಡೆದಾಗ ಆತನ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. 

ಈ ನಡುವೆ ಪ್ರತಿಭಟನಾಕಾರರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದಿರುವುದು ದೇಶದಲ್ಲಿ ಮತ್ತೊಂದು ಸುತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹಬ್ಬುವ ಭೀತಿಗೂ ಕಾರಣವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT