ವಿದೇಶ

ಕೋವಿಡ್-19 ಚಿಕಿತ್ಸೆಗಾಗಿ ಅಧಿಕ ಪ್ರಮಾಣದ ಅ್ಯಂಟಿ ಬಯಾಟಿಕ್ ಗಳ ಬಳಕೆಯಿಂದ ಜೀವಕ್ಕೆ ಹಾನಿ: ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸೋಂಕಿತರಿಗೆ ನೀಡುವ ಚಿಕಿತ್ಸೆ ವೇಳೆ ಅಧಿಕ ಪ್ರಮಾಣದ ಅ್ಯಂಟಿ ಬಯಾಟಿಕ್ (ಪ್ರತಿಜೀವಕ) ಗಳನ್ನು ನೀಡುವುದರಿಂದ ರೋಗಿಯ ಚೇತರಿಕೆಗಿಂತ ಪ್ರಾಣಾಪಾಯವೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧನೋಮ್ ಗೆಬ್ರೆಯೇಸಸ್ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದು, 'ಕೋವಿಡ್-19 ರೋಗ ನಿಯಂತ್ರಣಕ್ಕಾಗಿ ರೋಗಿಗಳಿಗೆ ಆ್ಯಂಟಿ ಬಯೋಟಿಕ್ (ಪ್ರತಿಜೀವಕ)ಗಳನ್ನು ನೀಡಲಾಗುತ್ತದೆ. ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ  ಜಾಸ್ತಿಯಾಗುವುದರ ಜತೆಗೆ ಅಧಿಕ ಪ್ರಮಾಣದ ಬಳಕೆಯಿಂದ ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು  ಹೇಳಿದ್ದಾರೆ.

ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ರೋಗನಿರೋಧಕ ಔಷಧಿಗಳನ್ನು ಅಸಮರ್ಪಕವಾದ ಬಳಕೆ ಮಾಡಿದರೆ ಉಂಟಾಗುವ ಅನಾಹುತಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಕೋವಿಡ್-19  ಜಾಗತಿಕ ಪಿಡುಗುನಿಂದಾಗಿ ಪ್ರತಿಜೀವಕಗಳ ಬಳಕೆ ವ್ಯಾಪಕವಾಗಿ ಆಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ವಿರುದ್ಧ  ಹೋರಾಡುವ ಶಕ್ತಿಯೂ ಹೆಚ್ಚಲಿದೆ. ಜಾಗತಿಕ ಪಿಡುಗು ವಿರುದ್ಧ ಹೋರಾಡುವ ಹೊತ್ತಲ್ಲಿ ಮತ್ತು ನಂತರದ ಅವಧಿಯಲ್ಲಿ ಇದು ರೋಗ ಮತ್ತು ಸಾವಿನ ಸಂಖ್ಯೆ ಹೆಚ್ಚಿಸುತ್ತದೆ ಎಂದು ಟೆಡ್ರೋಸ್ ಅಧನೋಮ್ ಹೇಳಿದ್ದಾರೆ.

ಇನ್ನು ಕೊರೋನಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾದ್ಯಂತ ನಡೆಸಿದ ಸರ್ವೇ ಕಾರ್ಯದಲ್ಲಿ ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆ್ಯಂಟಿ ಬಯಾಟಿಕ್ ಗಳ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಜಾಗತಿಕವಾಗಿ ಒಟ್ಟಾರೆ ಕೊರೋನಾ ಸೋಂಕಿತರ ಪೈಕಿ ಶೇ.49ರಷ್ಸು  ಸೋಂಕಿತರು ಸಕ್ಕರೆ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಶೇ.42ರಷ್ಟು ಸೋಂಕಿತರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಶೇ.31ರಷ್ಟು ಸೋಂಕಿತರು ಹೃದಯರಕ್ತನಾಳದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ. 

ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆ್ಯಂಟಿ ಬಯಾಟಿಕ್ ಗಳ ಬಳಕೆ ಮೇಲೆ ಮಿತಿ ಇರಿಸುವಂತೆ ಹೇಳಿದೆ. ಕಡಿಮೆ ಆದಾಯ ಹೊಂದಿರುವ ದೇಶಗಳು ಕೊರೋನಾ ವೈರಸ್ ನಿಂದಾಗಿ ಅತೀ ಹೆಚ್ಚು ನಷ್ಟ ಅನುಭವಿಸಿವೆ. ವಿಶ್ವದ ಶೇ.53ರಷ್ಟು ರಾಷ್ಟ್ರಗಳಲ್ಲಿ ಬಹುತೇಕ ಎಲ್ಲ ರೀತಿಯ ಸೇವೆಗಳು ಸ್ಥಗಿತವಾಗಿವೆ. 

SCROLL FOR NEXT