ವಿದೇಶ

ಡಾಟಾ ಸ್ಟೋರೇಜ್ ಸಂಸ್ಥೆಯಿಂದ 500 ನೌಕರರ ಉದ್ಯೋಗಕ್ಕೆ ಕತ್ತರಿ! 

Srinivas Rao BV

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಡಾಟಾ ಸ್ಟೋರೇಜ್ ಸಂಸ್ಥೆ ಸೀಗೇಟ್ ಟೆಕ್ನಾಲಜಿ ಜಾಗತಿಕ ಮಟ್ಟದಲ್ಲಿರುವ ತನ್ನ ಉದ್ಯೋಗಿಗಳ ಪೈಕಿ ಶೇ.1 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 

12 ದೇಶಗಳಲ್ಲಿರುವ ತನ್ನ ಉದ್ಯೋಗಿಗಳ ಪೈಕಿ 500 ಜನರನ್ನು ನೌಕರಿಯಿಂದ ತೆಗೆದಿರುವುದಾಗಿ ಸೀಗೇಟ್ ಟೆಕ್ನಾಲಜಿ ಹೇಳಿದ್ದು, ಯಾವ ಪ್ರಾಂತ್ಯದಲ್ಲಿ ಈ ಉದ್ಯೋಗ ಕಡಿತ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾರ್ಯನಿರ್ವಹಣೆ ಕ್ಷಮತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಷ್ಟೇ ಸಂಸ್ಥೆ ತಿಳಿಸಿದೆ. 

ಮತ್ತೊಂದು ಡಾಟಾ ಸ್ಟೋರೇಜ್ ಸಂಸ್ಥೆ ಹಿಟಾಚಿ ವಂಟಾರಾ ಅಮೆರಿಕಾದಲ್ಲಿ 151 ಉದ್ಯೋಗಿಗಳನ್ನು ತೆಗೆದುಹಾಕಿದೆ. ಐಡಿಸಿಯ ವರದಿಯ ಪ್ರಕಾರ ಸ್ಟೋರೇಜ್ ಮೇಲೆ ಮಾಡಲಾಗುತ್ತಿರುವ ಖರ್ಚು ಜಾಗತಿಕಮಟ್ಟದಲ್ಲಿ 5.73 ಬಿಲಿಯನ್ ಡಾಲರ್ ನಷ್ಟಾಗಿದೆ. 

SCROLL FOR NEXT