ವಿದೇಶ

ಕೊರೋನಾ ನಿಯಂತ್ರಿಸಲು ಕಠಿಣ ಕ್ರಮ: ಉತ್ತರಪ್ರದೇಶ ಸರ್ಕಾರ ಕೊಂಡಾಡಿದ ಪಾಕ್ ದಿನಪತ್ರಿಕೆ

Manjula VN

ಇಸ್ಲಾಮಾಬಾದ್: ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳನ್ನು ಪಾಕಿಸ್ತಾನದ ದಿನಪತ್ರಿಕೆಯೊಂದು ಕೊಂಡಾಡಿದೆ. 

ಪಾಕಿಸ್ತಾನ ಡಾನ್ ಪತ್ರಿಕೆಯ ಸಂಪಾದಕ ಉತ್ತರಪ್ರದೇಶದ ಕಠಿಣ ಕ್ರಮಗಳನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. 

ಪಾಕಿಸ್ತಾನವನ್ನು ಉತ್ತರಪ್ರದೇಶಕ್ಕೆ ಹೋಲಿಕೆ ಮಾಡಿರುವ ಡಾನ್ ಪತ್ರಿಕೆಯ ಸಂಪಾದಕ ಫಾಹದ್ ಹುಸೇನ್ ಅವರು, ಗ್ರಾಫ್ ವೊಂದನ್ನು ಹಂಚಿಕೊಂಡಿದ್ದಾರೆ. 

ಉತ್ತರಪ್ರದೇಶ, ಪಾಕಿಸ್ತಾನದ ಜನಸಂಖ್ಯೆ ಮತ್ತು ಸಾಕ್ಷರತೆ ಪ್ರಮಾಣ ಎರಡು ಸರಿಸುಮಾರು ಒಂದೇ ರೀತಿಯಾಗಿದೆ. ಪಾಕಿಸ್ತಾನದಲ್ಲಿ ಜನ ಸಾಂದ್ರತೆ ಕಡಿಮೆ ಇದ್ದು ಜಿಡಿಪಿ ಜಾಸ್ತಿಯಿದೆ. ಉತ್ತರಪ್ರದೇಶದಲ್ಲಿ ಲಾಕ್'ಡೌನ್ ಬಹಳ ಕಠಿಣವಾಗಿದ್ದ ಕಾರಣ ಕೊರೋನಾಗೆ ಮೃತಪಡುವ ಸೋಂಕಿತರ ಸಂಖ್ಯೆ ಕಡಿಮಿಯಿದೆ ಎಂದು ಬರೆದುಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಕಠಿಣ ಲಾಕ್'ಡೌನ್ ಮಾಡದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ. ಉತ್ತರಪ್ರದೇಶ ಶ್ರೀಮಂತ ರಾಜ್ಯವಲ್ಲ. ಉತ್ತರಪ್ರದೇಶಕ್ಕೆ ಹೋಲಿಕೆ ಮಾಡಿದರೆ, ಪಾಕಿಸ್ತಾನದಲ್ಲೇಕೆ ಸಾವಿನ ಸಂಖ್ಯೆ ಹೆಚ್ಚಾಗಿದೆ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಕೇಳಿದ್ದಾರೆ. 

ಮತ್ತೊಂದು ಟ್ವೀಟ್ ನಲ್ಲಿ ಉತ್ತರಪ್ರದೇಶದಲ್ಲಿ ಪಾಕಿಸ್ತಾನಕ್ಕಿಂತಲೂ ಕಡಿಮೆ ಸಾವಿನ ಸಂಖ್ಯೆಯಿದ್ದು, ಮಹಾರಾಷ್ಟ್ರದಲ್ಲಿ ಯುವ ಜನತೆ ಸಂಖ್ಯೆ ಹೆಚ್ಚಾಗಿದ್ದರೂ ಅಲ್ಲಿ ಸೋಂಕಿತರ ಸಂಖ್ಯೆಯೇಕೆ ಹೆಚ್ಚಾಗಿದೆ. ಉತ್ತರಪ್ರದೇಶ ಸರಿಯಾಗಿ ಏನನ್ನು ಮಾಡಿದೆ. ಮಹಾರಾಷ್ಟ್ರ ಮಾಡಿದ ತಪ್ಪುಗಳಾದರೂ ಯಾವುದು ಎಂಬುದರ ಪಾಠವನ್ನು ತಿಳಿಯಬೇಕಿದೆ ಎಂದಿದ್ದಾರೆ. 

ಪಾಕಿಸ್ತಾನದಲ್ಲಿ ಈ ವರೆಗೂ 1,05,118ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, ಒಟ್ಟು 2096 ಮಂದಿ ಬಲಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ 10,536 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, 275 ಮಂದಿ ಮೃತಪಟ್ಟಿದ್ದಾರೆ. 

SCROLL FOR NEXT