ವಿದೇಶ

ಭಾರತದ ವಿರೋಧದ ನಡುವೆಯೂ ನೇಪಾಳ ಸಂಸತ್ತಿನಲ್ಲಿ ಹೊಸ ನಕ್ಷೆಗೆ ಅಂಗೀಕಾರ!

Vishwanath S

ಕಾಠ್ಮಂಡು/ನವದೆಹಲಿ: ಮೂರು ಭಾರತೀಯ ಭೂ ಪ್ರದೇಶಗಳಾದ ಲಿಂಪಿಯಧುರ, ಲಿಪುಲೇಖ್ ಹಾಗೂ ಕಾಲಾಪಾನಿ ಒಳಗೊಂಡ ಪರಿಷ್ಕೃತ ರಾಜಕೀಯ ಭೂಪಟಕ್ಕೆ ಅವಕಾಶ ಕಲ್ಪಿಸುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ನೇಪಾಳ ಸಂಸತ್ತಿನ ಕೆಳಮನೆ ಶನಿವಾರ ಸರ್ವಾನುಮತದಿಂದ ಅಂಗೀಕಾರ ನೀಡಿದೆ.

ನೇಪಾಳಿ ಕಾಂಗ್ರೆಸ್(ಎನ್ ಸಿ), ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ್(ಆರ್ ಜೆ ಪಿ-ಎನ್) ಹಾಗೂ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ(ಆರ್ ಪಿ ಪಿ) ಸೇರಿದಂತೆ ನೇಪಾಳ ಪ್ರತಿಪಕ್ಷಗಳು ವಿಧೇಯಕದ ಪರವಾಗಿ ಮತ ಚಲಾಯಿಸಿದವು.

ಸಂವಿಧಾನ ತಿದ್ದುಪಡಿ ವಿದೇಯಕ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ಸ್ಪೀಕರ್ ಅಗ್ನಿ ಸಪ್ಕೋಟಾ ಪ್ರಕಟಿಸಿದರು.

ಮಸೂದೆಯನ್ನು ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ನ್ಯಾಷನಲ್ ಅಸೆಂಬ್ಲಿ ಅನುಮೋದನೆ ಪಡೆದುಕೊಳ್ಳು ಆಗತ್ಯವಿದೆ. ನಂತರ ದೇಶದ ಅಧ್ಯಕ್ಷರು ವಿದೇಯಕಕ್ಕೆ ಅಂಕಿತ ಹಾಕಿದ ನಂತರ ಅದು ಜಾರಿಗೆ ಬರಲಿದೆ.

ಇದಕ್ಕೂ ಮೊದಲು ನೇಪಾಳ ಸಂಪುಟ ಮೇ 20ರಂದು ಭಾರತೀಯ ಪ್ರದೇಶಗಳನ್ನು ಒಳಗೊಂಡ ಹೊಸ ಆಡಳಿತಾತ್ಮಕ ಭೂಪಟಕ್ಕೆ ಒಪ್ಪಿಗೆ ಸೂಚಿಸಿತ್ತು.

ನೇಪಾಳ ಸಶಸ್ತ್ರ ಪೊಲೀಸ್ ಪಡೆ- ಎನ್ ಎಪಿ ಎಫ್ ಬಿಹಾರದ ಸೀತಾಮಾರ್ಹಿ ಜಿಲ್ಲೆಯ ಗಡಿಯಲ್ಲಿ ಒಬ್ಬ ಭಾರತೀಯನ ಹತ್ಯೆ ಮಾಡಿ, ಇತರ ಇಬ್ಬರನ್ನು ಗಾಯಗೊಳಿಸಿ, ಉಳಿದವರನ್ನು ಬಂಧಿಸಿದ ದಿನದ ನಂತರ ನೇಪಾಳ ಸಂಸತ್ತು ಪರಿಷ್ಕೃತ ಭೂಪಟಕ್ಕೆ ಒಪ್ಪಿಗೆ ಸೂಚಿಸಿದೆ.

SCROLL FOR NEXT