ವಿದೇಶ

57 ಮಂದಿಯಲ್ಲಿ ಕೊರೋನಾ ಪತ್ತೆ: ಬೀಜಿಂಗ್ ಅತೀ ದೊಡ್ಡ ಮಾಂಸ ಮಾರುಕಟ್ಟೆ ಬಂದ್ ಮಾಡಿದ ಚೀನಾ

Manjula VN

ಬೀಜಿಂಗ್: ಕೊರೋನಾ ವೈರಸ್ ಉಗಮ ಸ್ಥಾನ ಚೀನಾದಲ್ಲೀಗ ಸೋಂಕಿತನ ಎರಡನೇ ಅಲೆ ಆರಂಭವಾಗಿದ್ದು, 24 ಗಂಟೆಗಳಲ್ಲಿ 57 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬೀಜಿಂಗ್'ನ ಅತೀ ದೊಡ್ಡ ಮಾಂಸ ಮಾರುಕಟ್ಟೆಯನ್ನೇ ಚೀನಾ ಬಂದ್ ಮಾಡಿದೆ. 

57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲಿಯೇ ವರದಿಯಾಗಿದ್ದು, 20 ಪ್ರಕರಣಗಳು ವಿದೇಶದಿಂದ ಆಗಮಿಸಿತ ಚೀನಿಯರಲ್ಲಿ ಪತ್ತೆಯಾಗಿದೆ ಎಂದು ಚೀನಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಬೀಜಿಂಗ್ ನಲ್ಲಿ 36 ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೀನು ಮತ್ತು ತರಕಾರಿಗೆ ಹೆಸರಾಗಿರುವ ಬೀಜಿಂಗ್'ನ ಜಿನ್ ಫಾದಿ ಹೋಲ್'ಸೇಲ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಮಾರುಕಟ್ಟೆ ಪ್ರದೇಶದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಲಾಗುತ್ತಿದೆ. 

ಮಾರುಕಟ್ಟೆಗೆ ಭೇಟಿ ನೀಡಿದ್ದ ಇಬ್ಬರು ವ್ಯಕ್ತಿಗಳಲ್ಲಿ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ 517 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 45 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ 45 ಮಂದಿಯಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT