ಡ್ರ್ಯಾಗನ್ ಸಂಹಾರಕ್ಕೆ ಸಿದ್ಧನಾದ ರಾಮ!: ಗಡಿಯಲ್ಲಿ ಭಾರತ-ಚೀನಾ ಸಂಘರ್ಷದ ಬಗ್ಗೆ ತೈವಾನ್ ಚಿತ್ರ ವೈರಲ್! 
ವಿದೇಶ

ಡ್ರ್ಯಾಗನ್ ಸಂಹಾರಕ್ಕೆ ಸಿದ್ಧನಾದ ರಾಮ: ಗಡಿಯಲ್ಲಿ ಭಾರತ-ಚೀನಾ ಸಂಘರ್ಷದ ಬಗ್ಗೆ ತೈವಾನ್ ಚಿತ್ರ ವೈರಲ್!

ಲಡಾಕ್ ನ ಗಡಿ ಭಾಗದಲ್ಲಿ ಚೀನಾ-ಭಾರತದ ನಡುವೆ ಸಂಘರ್ಷ ಪರಿಸ್ಥಿತಿ ಉಂಟಾಗಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಈ ಘಟನೆ ಬೆನ್ನಲ್ಲೇ, ತೈವಾನ್ ಸುದ್ದಿ ವೆಬ್ ಸೈಟ್ ಪ್ರಕಟಿಸಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. 

ಲಡಾಕ್ ನ ಗಡಿ ಭಾಗದಲ್ಲಿ ಚೀನಾ-ಭಾರತದ ನಡುವೆ ಸಂಘರ್ಷ ಪರಿಸ್ಥಿತಿ ಉಂಟಾಗಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಈ ಘಟನೆ ಬೆನ್ನಲ್ಲೇ, ತೈವಾನ್ ಸುದ್ದಿ ವೆಬ್ ಸೈಟ್ ಪ್ರಕಟಿಸಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. 

ತೈವಾನ್ ನ್ಯೂಸ್.ಕಾಮ್ ಎಂಬ ವೆಬ್ ಸೈಟ್ ಪ್ರಕಟಿಸಿರುವ ಚಿತ್ರದಲ್ಲಿ ಭಗವಾನ್ ಶ್ರೀರಾಮ ಡ್ರ್ಯಾಗನ್ ವಿರುದ್ಧ ಬಿಲ್ಲು ಬಾಣ ಹಿಡಿದು ನಿಂತಿರುವುದನ್ನು ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೇ We Conquer. We kill ಎಂಬ ಸಂದೇಶವನ್ನೂ ಬರಹದಲ್ಲಿ ಪ್ರಕಟಿಸಿದೆ.
ತೈವಾನ್ ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಈ ಚಿತ್ರವನ್ನು ಹಾಂಕ್ ಕಾಂಗ್ ನ ಸಾಮಾಜಿಕ ಜಾಲತಾಣ ಎಲ್ಐಹೆಚ್ ಕೆ ಜಿಯಲ್ಲಿಯೂ ಪ್ರಕಟಿಸಲಾಗಿತ್ತು. ಹಾಂಕ್ ಕಾಂಗ್ ನ ಟ್ವಿಟರ್ ಬಳಕೆದಾರ ಹೊಸೈಲೈ ಎಂಬ ವ್ಯಕ್ತಿ ಹಂಚಿಕೊಂಡಿದ್ದರು. 24 ಗಂಟೆಗಳಲ್ಲಿ ಈ ಚಿತ್ರಕ್ಕೆ 861 ಲೈಕ್ ಗಳು 300 ರಿಟ್ವೀಟ್ ಗಳು ಇದಕ್ಕೆ ಬಂದಿವೆ.

ಭಾರತದ ಸಾಮಾಜಿಕ ಜಾಲತಾಣಗಳಲ್ಲೂ ಈ ಚಿತ್ರ ವೈರಲ್ ಆಗಿದ್ದು, ನೆಟಿಜನ್ ಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಜೂ.15 ರಂದು ರಾತ್ರಿ ಲಡಾಕ್ ನ ಗಾಲ್ವಾನ್ ಪ್ರಾಂತ್ಯದಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕ್ ನಲ್ಲಿ ಮತ್ತೆ 'ದುರಂಧರ್' ಆಟ: ಲಷ್ಕರ್ ಕಮಾಂಡರ್ ನಿಗೂಢ ಸಾವು, ಊಟ ಮಾಡಿ ಮಸೀದಿ ಬಳಿ ಕುಸಿದು ಬಿದ್ದ Qari Saeed Abdul Aziz

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ