ವಿದೇಶ

24 ಗಂಟೆಗಳಲ್ಲಿ ವಿಶ್ವದಲ್ಲಿ 1 ಲಕ್ಷ 83 ಸಾವಿರ ಹೊಸ ಪಾಸಿಟಿವ್ ಪ್ರಕರಣ ದಾಖಲು

Srinivasamurthy VN

ವಾಷಿಂಗ್ಟನ್: ವಿಶ್ವದ 213 ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 1 ಲಕ್ಷದ 83 ಸಾವಿರ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಆ ಮೂಲಕ ಜಾಗತಿಕವಾಗಿ ಒಟ್ಟಾರೆ ಸೋಂಕಿತರ ಸಂಖ್ಯೆ 9,046,215ಕ್ಕೆ ಏರಿಕೆಯಾಗಿದೆ. ಬ್ರೆಜಿಲ್ ದೇಶವೊಂದರಲ್ಲೇ 54,771 ಹೊಸ ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 36,617 ಪ್ರಕರಣಗಳು ದಾಖಲಾಗಿವೆ. ಇನ್ನು ಭಾರತದಲ್ಲಿ ನಿನ್ನೆ ಒಂದೇ ದಿನ ಗರಿಷ್ಠ 15,400 ಹೊಸ ಪ್ರಕರಣಗಳು ದಾಖಲಾಗಿವೆ.  

ಇನ್ನು ಜಗತ್ತಿನಾದ್ಯಂತ 470,703ಮಂದಿ ಸೋಂಕಿತರು ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಈ ಪೈಕಿ ಬ್ರೆಜಿಲ್ ನಲ್ಲಿ ನಿನ್ನೆ ಒಂದೇ ದಿನ 640 ಮಂದಿ ಸಾವಿಗೀಡಾಗಿದ್ದು, ಆ ಮೂಲಕ ಬ್ರೆಜಿಲ್ ನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 50,617ಕ್ಕೆ ಏರಿಕೆಯಾಗಿದೆ.

ಒಟ್ಟಾರೆ 9,046,215 ಸೋಂಕಿತರ ಪೈಕಿ, 4,838,359 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 

SCROLL FOR NEXT