ವಿದೇಶ

ಚೀನಾದಲ್ಲಿ ಉಯಿಘರ್ ಮುಸ್ಲಿಂ ಜನಸಂಖ್ಯೆ ನಿಗ್ರಹಕ್ಕೆ ಗರ್ಭನಿರೋಧಕ, ಬಲವಂತದ ಗರ್ಭಪಾತ!

Vishwanath S

ಬೀಜಿಂಗ್: ಉಯಿಘರ್ ಮುಸ್ಲಿಂ ಜನಸಂಖ್ಯೆ ನಿಗ್ರಹಕ್ಕೆ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಗರ್ಭನಿರೋಧಕ ಮತ್ತು ಬಲವಂತದ ಗರ್ಭಪಾತಕ್ಕೆ ಒತ್ತಾಯಿಸಲಾಗುತ್ತಿದೆ. 

ಉಯಿಘರ್ ಮುಸ್ಲಿಂರು ಹೆಚ್ಚಾಗಿರುವ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಬಹುಸಂಖ್ಯಾತ ಹ್ಯಾನ್ ಸಮುದಾಯದವರಿಗೆ ಹೆಚ್ಚಿನ ಮಕ್ಕಳನ್ನು ಹೊಂದಲು ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಅಲ್ಪಸಂಖ್ಯಾತ ಮಹಿಳೆಯರಿಗೆ ಗರ್ಭನಿರೋಧಕ ಬಳಸಲು ಆಗ್ರಹಿಸಲಾಗುತ್ತಿದೆ. 

ಹೆಚ್ಚಿನ ಮಕ್ಕಳನ್ನು ಹೊಂದಿರುವ ಉಯಿಘರ್ ಮುಸ್ಲಿಂರನ್ನು ನಿರಾಶ್ರಿತರ ಶಿಬಿರಗಳಲ್ಲಿ ಬಲವಂತದ ಬಂಧನಕ್ಕೆ ಒಳಪಡಿಸಲಾಗುತ್ತದೆ. ಮೂರಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. 

ಅಲ್ಲಿನ ಪೊಲೀಸರು ಹೆಚ್ಚಿನ ಮಕ್ಕಳನ್ನು ಹೊಂದಿರುವ ಪೋಷಕರ ಮನೆಗಳ ಮೇಲೆ ದಾಳಿ ಮಾಡಿ ಹೆದರಿಸುತ್ತಿದೆ. ಜೊತೆಗೆ ಬಲವಂತದ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೆ. 

2015-18ರ ಅವಧಿಯಲ್ಲಿ ಉಯಿಘರ್ ಪ್ರಾಂತ್ಯದ ಹೋಟನ್ ಮತ್ತು ಕಾಶರ್ ವಲಯಗಳಲ್ಲಿ ಜನನ ಪ್ರಮಾಣ ಶೇ. 60ಕ್ಕೆ ಕುಸಿದಿದೆ ಎಂಬುದನ್ನು ಚೀನಾ ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತವೆ. 

SCROLL FOR NEXT