ವಿದೇಶ

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ

Manjula VN

ಕ್ಯಾಲಿಫೋರ್ನಿಯಾ: ಇದೂವರೆಗೂ ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲರ ಹರಡುತ್ತಿದೆ ಎನ್ನಲಾಗಿದ್ದ ಕರೋನಾ ವೈರಸ್ ಇದೀಗ ವಿಶ್ವದಾದ್ಯಂತ ನಿಗೂಢವಾಗಿ ವ್ಯಾಪಿಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ. 

ಇದೂವರೆಗೂ ಕೊರೋನಾ ಕೇಂದ್ರ ಸ್ಥಾನ ವುಹಾನ್'ಗೆ ಭೇಟಿ ನೀಡಿದವರ ಅಥವಾ ಕೊರೋನಾಕ್ಕೆ ತುತ್ತಾದವರು ಇತರರ ಜೊತೆ ಸೇರುವುದರಿಂದ ಸೋಂಕು ಹಬ್ಬುತ್ತಿದೆ ಎನ್ನಲಾಗಿತ್ತು. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಕೊರೋನಾ ಪೀಡಿತನ ಜೊತೆ ಸಂಪರ್ಕ ಹೊಂದಿಲ್ಲದ ಹೊರತೂ, ವ್ಯಕ್ಯಿಯೊಬ್ಬ್ ಕೋರನಾಕ್ಕೆ ತುತ್ತಾಗಿದ್ದಾನೆಂದು ವರದಿಗಳು ತಿಳಿಸಿವೆ. 

ಇದೇ ವಳೆ ಮಾ.14ರಂದು ಲಾಸ್ ವೇಗಸ್ ನಲ್ಲಿ ನಿಗದಿಯಾಗಿದ್ದ ಆಸಿಯಾನ್ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

ಇನ್ನು ಕೊರೆನಾ ವೈರಸ್ ಅಮೆರಿಕಾದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ವಾಷಿಂಗ್ಟನ್ ರಾಜ್ಯದ ಕಿಂಗ್ ಕೌಂಟಿ ನಗರದಲ್ಲಿ ವ್ಯಕ್ತಿಯೊಬ್ಬ ಕೊರೋನಾ ವೈರಸ್'ಗೆ ಬಲಿ ಆಗಿರುವುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. 

ಅಮೆರಿಕಾದಲ್ಲಿ ಈವರೆಗೆ ಶಂಕಿತ 66 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಗುಣಮುಖರಾಗಿದ್ದಾರ. ವಾಷಿಂಗ್ಟನ್ ನಲ್ಲಿ ಪತ್ತೆಯಾದ 3 ಪ್ರಕರಣಗಳ ಪೈಕಿ ಒಬ್ಬ ಮೃತಪಟ್ಟಿದ್ದಾನೆ. ಇದೇ ವೇಳೆ ವ್ಯಾಪಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. 

ಕೊರೋನಾ ವೈರಸ್ ಹರಡುವ ಭೀತಿಯಿಂದಾಗಿ ಪರಸ್ಪರ ಕೈ ಕುಲುಕಿ ಸ್ವಾಗತಿಸುವುದನ್ನು ಕಡಿಮೆ ಮಾಡಿ ಎಂದು ಫ್ರಾನ್ಸ್ ತನ್ನ ನಾಗರೀಕರಿಗೆ ತಿಳಿಸಿದೆ. ಅಲ್ಲದೆ ಮುತ್ತು ಕೊಟ್ಟು ಸ್ವಾಗತಿಸುವುದಕ್ಕೆ ಕೂಡಲೇ ಜಾರಿಗೆ ಬರುವಂತೆಯೂ ನಿಷೇಧ ಹೇರಿದೆ. 

ಫ್ರಾನ್ಸ್ ಸಹಿತ ಯುರೋಪ್'ನ ವಿವಿಧ ಭಾಗಗಳಲ್ಲಿ ಪರಸ್ಪರ ಚುಂಬಿಸಿ ಸ್ವಾಗತ ಕೋರುವುದು ಸಂಪ್ರದಾಯವಾಗಿದ್ದು, ಚುಂಬನ ಜೊತೆಗೆ ಒಳಾಂಗಣದಲ್ಲಿ 5000ಕ್ಕೂ ಹೆಚ್ಚು ಮಂದಿಯನ್ನು ಸೇರುವುದನ್ನೂ ನಿಷೇಧಿಸಲಾಗಿದೆ. ಫ್ರಾನ್ಸ್ ನಲ್ಲಿ ಸೋಂಕು ಇಬ್ಬರನ್ನು ಈಗಾಗಲೇ ಬಲಿಪಡೆದುಕೊಂಡಿದೆ,

SCROLL FOR NEXT