ವಿದೇಶ

ಕಾಬುಲ್'ನಲ್ಲಿ ಭೀಕರ ಉಗ್ರರದಾಳಿ: 32 ಮಂದಿ ಸಾವು, 61 ಮಂದಿಗೆ ಗಾಯ

Manjula VN

ಕಾಬುಲ್: ಆಘ್ಫಾನಿಸ್ತಾನಗ ಕಾಬುಲ್ ನಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ 32 ಮಂದಿ ಸಾವನ್ನಪ್ಪಿ, 61ಕ್ಕೂ ಹೆಚ್ಚಿ ಮಂದಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 

ಅಫ್ಘಾಸ್ತಾನದ ಪ್ರಮುಖ ರಾಜಕೀಯ ಪಕ್ಷದ ಹೆಜ್ಬ್-ಇ-ವಹ್ದತ್'ನ ನಾಯಕರಾಗಿದ್ದ ಅಬ್ದುಲ್ ಅಲಿ ಮಜಾರಿ ಅವರ ಮರಣ  ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಹಜಾರಸ್ ಸಮುದಾಯದ ಪ್ರಮುಖ ನಾಯಕರೆನಿಸಿಕೊಂಡಿದ್ದ ಮಜಾರಿ ಸ್ಮರಣಾರ್ಥವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಹಲವು ರಾಜಕೀಯ ಪ್ರಮುಖರು ಭಾಗವಿಸಿದ್ದರು, ಇದೀಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಲಿವೆ ಎಂದು ಮೂಲಘಲಿಂದ ತಿಳಿದುಬಂದಿದೆ. 

ಘಟನೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅಮಾನವೀಯ ಹಾಗೂ ದೇಶದ ಏಕತೆಯ ವಿರುದ್ಧ ನಡೆದ ದಾಳಿ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

ಇನ್ನು ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಇಸಿಸ್ ಬರೆದುಕೊಂಡಿದೆ. 

ಇತ್ತೀಚೆಗಷ್ಟೇ ಅಮೆರಿಕಾ ಹಾಗೂ ತಾಲಿಬಾನ್ ನಡುವೆ ಶಾಂತಿ ಒಪ್ಪಂದ ನಡೆದಿತ್ತು. ಒಪ್ಪಂದದಲ್ಲಿ ಕೆಲ ಷರತ್ತುಗಳನ್ನು ತಿಳಿಸಲಾಗಿತ್ತು. ಆದರೆ, ಆರಂಭದಲ್ಲಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದ ಅಫ್ಘಾನ್ ಅಧ್ಯಕ್ಷ ನಂತರ ದಿನಗಳಲ್ಲಿ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕ್ಯಾತೆ ತೆಗೆದಿದ್ದರು. ಇದರಿಂದ ಕೆಂಡಾಮಂಡಲಗೊಂಡಿದ್ದ ತಾಲಿಬಾನ್ ಉಗ್ರರು ಮತ್ತೆ ತಮ್ಮ ದಾಳಿಯನ್ನು ಮುಂದುವರೆಸಿ, ನಮ್ಮ ಶಾಂತಿ ಒಪ್ಪಂದವೇನಿದ್ದರೂ ಅಮೆರಿಕಾದ ಜೊತೆಗೆಯೇ ಹೊರತು ಆಫ್ಘಾನ್ ಜೊತೆಗಲ್ಲ, ಅಫ್ಘಾನ್ ಭದ್ರತಾಪಡೆಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಘೋಷಣೆ ಮಾಡಿತ್ತು. 

SCROLL FOR NEXT