ವಿದೇಶ

ಇರಾನ್ ಸಂಸದೆ ಕೊರೊನಾ ಸೋಂಕಿಗೆ ಬಲಿ

Srinivasamurthy VN

ಟೆಹ್ರಾನ್: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಇರಾನ್ ನ ಸಂಸದರೊಬ್ಬರು ಬಲಿಯಾಗಿದ್ದಾರೆ.

ಇರಾನ್‌ನ ಕನ್ಸರ್ವೇಟಿವ್ ಪಕ್ಷದ ಸಂಸದೆ ಫಾತೆಮೆ ರಬಾರ್ (55 ವರ್ಷ) ಕೊರೊನಾ ವೈರಸ್ ಸೋಂಕಿನಿಂದ ತೀವ್ರ ಅಸ್ವಸ್ಥರಾಗಿ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದುಬಂದಿದೆ. ಟೆಹ್ರಾನ್ ಸಂಸದೀಯ ಕ್ಷೇತ್ರದಿಂದ ಫಾತೆಮೆ ರಬಾರ್ ಇತ್ತೀಚೆಗೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. 

ಫಾತೆಮೆ ರಬಾರ್ ಇರಾನ್ ನಲ್ಲಿ ಕೊರೋನಾ ವೈರಸ್ ಗೆ ತುತ್ತಾಗಿ ಸಾವನ್ನಪ್ಪಿದ ಎರಡನೇ ಜನಪ್ರತಿನಿಧಿಯಾಗಿದ್ದಾರೆ. ಅಲ್ಲದೆ ಇರಾನ್ ನಲ್ಲಿ 7ಮಂದಿ ಜನಪ್ರತಿನಿಧಿಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇರಾನ್ ನಲ್ಲಿ ಈ ವರೆಗೂ ಒಟ್ಟು 4,747 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 124 ಮಂದಿ ಸಾವನ್ನಪ್ಪಿದ್ದಾರೆ.

ಕೊರೋನಾ ವೈರಲ್ ಭೀತಿಯಿಂದಾಗಿ ಇರಾನ್ 37 ಪ್ರಾಂತ್ಯಗಳಲ್ಲಿನ ಎಲ್ಲ ಶಾಲಾ ಕಾಲೇಜುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

SCROLL FOR NEXT