ವಿದೇಶ

ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಮಹಾಮಾರಿಗೆ 8 ಸಾವಿರ ಬಲಿ, ಭಾರತದಲ್ಲಿ 152 ಸೋಂಕು ಪತ್ತೆ!

Vishwanath S

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದ ಚೀನಾ ಕೊಂಚ ಸುಧಾರಿಸಿಕೊಂಡಿದೆ. ಆದರೆ ಮಧ್ಯ ಪ್ರಾಚ್ಯ ದೇಶಗಳು ಮಾತ್ರ ತೀವ್ರ ಮಟ್ಟದಲ್ಲಿ ತತ್ತರಿಸಿದ್ದು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 8 ಸಾವಿರ ಗಡಿದಾಟಿದೆ. 

ಸದ್ಯದ ಮಟ್ಟಿಗೆ ಚೀನಾದಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಇಟಲಿಯಲ್ಲಿ ಮಾತ್ರ ಮರಣ ಮೃದಂಗ ಬಾರಿಸುತ್ತಿದೆ. ಚೀನಾದಲ್ಲಿ ಐದು ತಿಂಗಳಿನಿಂದ 3,237 ಮಂದಿ ಸಾವನ್ನಪ್ಪಿದ್ದರೆ. ಇಟಲಿಯಲ್ಲಿ ಮಾತ್ರ 15 ದಿನಗಳಲ್ಲೇ ಸಾವಿನ ಸಂಖ್ಯೆ 2,503ಕ್ಕೆ ಏರಿಕೆಯಾಗಿದೆ.

ಒಟ್ಟಾರೆ ಜಗತ್ತಿನಾದ್ಯಂತ 2 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು 8,010 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 83 ಸಾವಿರ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 152ಕ್ಕೆ ಏರಿಕೆಯಾಗಿದ್ದು ಮೂರು ಮಂದಿ ಸಾವನ್ನಪ್ಪಿದ್ದಾರೆ. ಇಂದು ಹೊಸದಾಗಿ 9 ಪ್ರಕರಣಗಳು ಪತ್ತೆಯಾಗಿವೆ.

SCROLL FOR NEXT