ವಿದೇಶ

ಸ್ವರಕ್ಷಣಾ ಸಾಧನಗಳನ್ನು ಒದಗಿಸದಿದ್ದರೆ ಒಪಿಡಿ ಬಂದ್: ಕೋವಿಡ್-19 ಭಯದ ನಡುವೆ ಪಾಕಿಸ್ತಾನ ವೈದ್ಯರಿಂದ ಮುಷ್ಕರದ ಬೆದರಿಕೆ

Raghavendra Adiga

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಾರಣಾಂತಿಕ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಇಲ್ಲಿನ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯಪ್ರತಿನಿಧಿಗಳಿಗೆ ಸೂಕ್ತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ)  ಸಿಕ್ಕಿಲ್ಲ. ಇದೀಗ ವೈದ್ಯ ಸಿಬ್ಬಂದಿಗಳು ತಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ)  ಒದಗಿಸದೆ ಹೋದಲ್ಲಿ ಮಾರ್ಚ್ 24 ರಿಂದ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಡಾನ್ ಪತ್ರಿಕೆ ವರದಿಯ ಪ್ರಕಾರ  ಪ್ರತಿನಿಧಿಗಳು ಗುರುವಾರ ವೈಯಕ್ತಿಕ ರಕ್ಷಣಾ ಸಾಧನಗಳಿಲ್ಲದೆ (ಪಿಪಿಇ) ಕೆಲಸ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಮತ್ತು ಮಾರ್ಚ್ 24 ರಿಂದ ಹೊರರೋಗಿ ವಿಭಾಗಗಳನ್ನು (ಒಪಿಡಿ) ಮುಚ್ಚುವುದಾಗಿ ಘೋಷಿಸಿದರು.

ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಪಿಮ್ಸ್) ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಮ್ಸ್, ಪಾಲಿಕ್ಲಿನಿಕ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಿಹಬಿಲಿಟೆಷನ್ ಮೆಡಿಸಿನ್ (ಎನ್‌ಐಆರ್ಎಂ) ಮತ್ತು ಫೆಡರಲ್ ಜನರಲ್ ಹಾಸ್ಪಿಟಲ್‌ನ ನಾಲ್ಕು ಆಸ್ಪತ್ರೆಗಳ ವೈದ್ಯರು ಭಾಗವಹಿಸಿದ್ದರು.ಈ ವೇಳೆ ವೈದ್ಯಕೀಯ ವೃತ್ತಿಪರರಿಗೆ ಉಂಟಾಗುವ ಅಪಾಯಗಳನ್ನು ವಿವರಿಸಿದ ವೈದ್ಯರು ಪಿಪಿಇ ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಕೋರಿದ್ದಾರೆ ಆದರೆ ಅವರ ಕಾಳಜಿಯನ್ನು ಯಾರೂ ಕೇಳಲು  ತಯಾರಿಲ್ಲ.

"ಪ್ರಸ್ತುತ ಪರಿಸ್ಥಿತಿಯಲ್ಲಿ, ನಮಗೆ ಕೆಲಸ ಮುಂದುವರಿಸುವುದು ಅಸಾಧ್ಯವಾಗಿದೆ. ಪಿಪಿಇ ನಮಗೆ ಒದಗಿಸದಿದ್ದರೆ ಮಾರ್ಚ್ 24 ರಿಂದ ನಾವು ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆಕೋವಿಡ್-೧೯ ಅನ್ನು ಹೊರದಬ್ಬಲು  ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂಬ ಭರವಸೆಯನ್ನು ನಾವು ಕೇಳಬಯಸುತ್ತೇವೆ.  ಕರ್ತವ್ಯ ನಿರ್ವಹಿಸುವಾಗ. ನಮ್ಮ ಕರ್ತವ್ಯವನ್ನು ಮುಂದುವರಿಸಲು ನಾವು ಸಿದ್ಧರಿದ್ದರೂ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡುವುದು ಆತ್ಮಹತ್ಯೆಗೆ ಸಮ"

ಪಾಕಿಸ್ತಾನದಲ್ಲಿ ಇದುವರೆಗೆ 495 ಕೊರೋನಾ ಪ್ರಕರಣಗಳು ವರದಿಯಾಗಿದೆ. ಸಿಂಧ್ ಪ್ರಾಂತ್ಯ ಒಂದರಲ್ಲೇ 252 ಕೊರೋನಾ ಪ್ರಕರಣ ಪತ್ತೆಯಾಗಿದೆ. 

SCROLL FOR NEXT