ವಿದೇಶ

ಚೀನಾದಲ್ಲಿ 4 ದಿನಗಳ ಬಳಿಕ ಮೊದಲ ದೇಶೀಯ ಸೋಂಕು ಪತ್ತೆ: ಸಾವಿನ ಸಂಖ್ಯೆ 3,261ಕ್ಕೆ ಏರಿಕೆ

Manjula VN

ಬೀಜಿಂಗ್: ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿ ಚೀನಾದಲ್ಲಿ ಮೊದಲ ದೇಶೀಯ ಕೊರೋನಾ ಪ್ರಕರಣವೊದು ದಾಖಲಾಗಿದೆ. 

ಕೊರೋನಾ ವೈರಸ್ ಚೀನಾದ ವುಹಾನ್ ನಲ್ಲಿ ಹುಟ್ಟಿದ್ದು, ಕೆಲ ದಿನಗಳಿಂದ ಚೀನಾದಲ್ಲಿ ಯಾರೊಬ್ಬರಲ್ಲೂ ವೈರಸ್ ಪತ್ತೆಯಾಗಿರಲಿಲ್ಲ. ಈ ಬೆಳವಣಿಗೆ ಇಡೀ ವಿಶ್ವವನ್ನೇ ಆಶ್ಚರ್ಯಕ್ಕೊಳಗಾಗುವಂತೆ ಮಾಡಿತ್ತು. ಚೀನಾದಲ್ಲಿ ಇನ್ನೇನು ಸೋಂಕು ತಹಬದಿಗೆ ಬಂದಿದೆ ಅನ್ನುವಷ್ಟರಲ್ಲಿಯೇ ಇದೀಗ ಮತ್ತೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮತ್ತೆ ಚೀನಾದಲ್ಲಿ ಆತಂಕ ಶುರುವಾಗಿದೆ. 

ಕಳೆದ ನಾಲ್ಗಕು ದಿನಗಳಲ್ಲಿ ಅಲ್ಲಿ ಯಾವುದೇ ದೇಶೀಯ ಸೋಂಕು ಕಂಡು ಬಂದಿರಲಿಲ್ಲ. ಶನಿವಾರ 46 ಮಂದಿಗೆ ಸೋಂಕು ದೃಢವಾಗಿದ್ದು, ಇದರಲ್ಲಿ ಒಂದು ದೇಶೀಯ ಪ್ರಕರಣ ವಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 81,054ಕ್ಕೆ ಮುಟ್ಟಿದೆ. ಹುಬೇ ಪ್ರಾಂತ್ಯದಲ್ಲಿ 5 ಸೇರಿ 6 ಮಂದಿ ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 3,261ಕ್ಕೆ ಏರಿಕೆಯಾಗಿದೆ.

SCROLL FOR NEXT