ವಿದೇಶ

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು

Nagaraja AB

ಬೀಜಿಂಗ್ :ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲಿ ಜಾರಿಗೊಳಿಸಲಾಗಿದ್ದ ಪ್ರಯಾಣ ಮೇಲಿನ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗುವುದು ಎಂದು ಚೀನಾ ಹೇಳಿದೆ.

ವುಹಾನ್ ನಲ್ಲಿ  ಜಾರಿಯಲ್ಲಿದ್ದ ಮೂರು ತಿಂಗಳ ಲಾಕ್ ಡೌನ್ ಏಪ್ರಿಲ್ 8 ರಂದು ಕೊನೆಗೊಳ್ಳಲಿದೆ. ಸಾಮೂಹಿಕ ಕ್ವಾರಂಟೀನ್ ನ್ನು ಕೂಡಾ ತೆರವುಗೊಳಿಸಲಾಗುತ್ತಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

ವುಹಾನ್ ನಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಕೊರೋನಾವೈರಸ್ ಕಾಣಿಸಿಕೊಂಡಿತ್ತು. ನಿನ್ನೆಯವರೆಗೂ ಸತತ ಐದು ದಿನಗಳ ಕಾಲ ಯಾವುದೇ ಸೋಂಕು ಪ್ರಕರಣಗಳು ಇಲ್ಲಿ ಪತ್ತೆಯಾಗಿಲ್ಲ.

ವುಹಾನ್ ಹಾಗೂ ಹುಬೈ ಪ್ರಾಂತ್ಯದಲ್ಲಿ ಜನವರಿ 23 ರಿಂದಲೂ ಸುಮಾರು 56 ಮಿಲಿಯನ್ ಜನರನ್ನು ಕಠಿಣವಾದ ಲಾಕ್ ಡೌನ್ ಇಲ್ಲಿ ಇಡಲಾಗಿದೆ. ಜನ ಹಾಗೂ ಸಾರಿಗೆ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಬುಧವಾರದಿಂದ ಹುಬೈ ಪ್ರಾಂತ್ಯದಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ.ವುಹಾನ್  ಜನರಿಗೆ ಏಪ್ರಿಲ್ 8 ರಿಂದ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಹುಬೈ ಆರೋಗ್ಯ ಆಯೋಗ ಪ್ರಕಟಿಸಿರುವುದಾಗಿ ಸರ್ಕಾರಿ ಸಂಸ್ಥೆ ಸಿಜಿಟಿವಿ ವರದಿ ಮಾಡಿದೆ.

SCROLL FOR NEXT