ವಿದೇಶ

2009ರ ಪರಿಸ್ಥಿತಿಗಿಂತಲೂ ಕೊರೋನಾ ವೈರಸ್ ನಿಂದ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ: ಐಎಂಎಫ್ 

Sumana Upadhyaya

ವಾಷಿಂಗ್ಟನ್:ಕೊರೋನಾ ವೈರಸ್ ಸೋಂಕಿನಿಂದ ವಿಶ್ವದ ಆರ್ಥಿಕತೆ ತೀವ್ರ ಹದಗೆಟ್ಟಿದ್ದು ಇದರ ಪರಿಣಾಮ 2009ರ ಆರ್ಥಿಕ ಕುಸಿತದಿಂದಲೂ ತೀವ್ರವಾಗಿದೆ. ಇದಕ್ಕೆ ತಕ್ಷಣದ ಪರಿಹಾರ ಅತ್ಯಗತ್ಯ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.


ಜಿ 20 ದೇಶಗಳ ಹಣಕಾಸು ಸಚಿವರುಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ಶ್ರೀಮಂತ ರಾಷ್ಟ್ರಗಳು ಕಡಿಮೆ ಆದಾಯದ ದೇಶಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಬೇಕು. 1 ಟ್ರಿಲಿಯನ್ ಸಾಲ ಸಾಮರ್ಥ್ಯವನ್ನು ನಿಯೋಜಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಿದ್ದವಾಗಿದೆ ಎಂದರು.


2020ರ ಜಾಗತಿಕ ಬೆಳವಣಿಗೆ ಋಣಾತ್ಮಕವಾಗಿದ್ದು ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭಕ್ಕಿಂತಲೂ ಈಗ ಪರಿಸ್ಥಿತಿ ಹದಗೆಟ್ಟಿದೆ ಎಂದರು.

SCROLL FOR NEXT