ವಿದೇಶ

ಭಾರತ ಲಾಕ್ ಡೌನ್ ಸಮಗ್ರ ಮತ್ತು ದಿಟ್ಟ ಕ್ರಮ ಎಂದ ವಿಶ್ವ ಆರೋಗ್ಯ ಸಂಸ್ಥೆ 

Sumana Upadhyaya

ಯುನೈಟೆಡ್ ನೇಷನ್ಸ್: ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸಂಪೂರ್ಣ ಭಾರತದ 21 ದಿನಗಳ ಲಾಕ್ ಡೌನ್ ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಸಮಗ್ರ, ದಿಟ್ಟ ಕ್ರಮ ಎಂದು ಶ್ಲಾಘಿಸಿದೆ. ಕೊರೋನಾ ಸೋಂಕಿನ ವಿರುದ್ಧ ಭಾರತ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಹೇಳಿದೆ.

ಭಾರತ ಕೊರೋನಾ ವೈರಸ್ ವಿರುದ್ಧ ಕಣ್ಗಾವಲು, ಪ್ರಯೋಗಾಲಯದ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕತೆ ಮತ್ತು ಅಪಾಯಗಳ ಬಗ್ಗೆ ತಿಳಿಹೇಳುವುದು ಒಳಗೊಂಡಂತೆ ತಡೆಗಟ್ಟುವಿಕೆಗೆ ಬೃಹತ್ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 18 ಸಾವಿರದ 915ಕ್ಕೇರಿದ್ದು, 4 ಲಕ್ಷದ 22 ಸಾವಿರದ 900 ಕೇಸುಗಳು ಜಗತ್ತಿನ 165ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ವರದಿಯಾಗಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 562ಕ್ಕೇರಿದ್ದು ಇದುವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿರುವ ಅಂಕಿಅಂಶ ತಿಳಿಸಿದೆ.

SCROLL FOR NEXT