ವಿದೇಶ

ಕೊರೋನಾ ವೈರಸ್ ರುದ್ರತಾಂಡವ: ಇಟಲಿಯಲ್ಲಿ ನಕರ, ವಿಶ್ವದಲ್ಲಿ 23 ಸಾವಿರ ಬಲಿ, 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

Vishwanath S

ನವದೆಹಲಿ: ವಿಶ್ವದಾದ್ಯಂತ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ವಿಶ್ವದಾದ್ಯಂತ 23 ಸಾವಿರ ಮಂದಿ ಬಲಿಯಾಗಿದ್ದಾರೆ.

ವಿಶ್ವದ ಒಟ್ಟು 182 ದೇಶಗಳಲ್ಲಿ ವೈರಸ್'ಗೆ 23, 62 ಮಂದಿ ಬಲಿಯಾಗಿದ್ದು, 5,22,749 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಭಾರತದಲ್ಲೂ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡುವುದರೊಂದಿಗೆ ಇಡೀ ವಿಶ್ವವೇ ಮೂರನೇ ಒಂದರಷ್ಟು ಅಥವಾ 260 ಕೋಟಿ ಜನರು ಇದೀಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದು, ತಮ್ಮ ಗಡಿಗಳನ್ನು ಬಂದ್  ಮಾಡಿವೆ. 

ಇಟಲಿಯಲ್ಲಿ ಒಂದೇ ದಿನ 712 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 8,215ಕ್ಕೇರಿದೆ. ಇನ್ನು ಸ್ಪೇನ್ ನಲ್ಲಿ 498 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 4,145ಕ್ಕೇರಿದೆ. 

ಭಾರತದಲ್ಲಿ ಹೊಸದಾಗಿ 65 ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 722ಕ್ಕೇರಿದೆ. ಇನ್ನು ಸಾವಿನ ಸಂಖ್ಯೆ 18ಕ್ಕೇರಿದೆ.

SCROLL FOR NEXT