ವಿದೇಶ

ಇಟಲಿಯಲ್ಲಿ ಹೆಣಗಳ ರಾಶಿ: ಕೊರೋನಾಗೆ ಒಂದೇ ದಿನ ದಾಖಲೆಯ 1000 ಬಲಿ, ವಿಶ್ವದಾದ್ಯಂತ 26,900 ಸಾವು!

Vishwanath S

ರೋಮ್/ನವದೆಹಲಿ: ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಇಂದು ಒಂದೇ ದಿನ ಬರೋಬ್ಬರಿ 1000 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 9,134ಕ್ಕೆ ಏರಿಕೆಯಾಗಿದೆ. 

ಇದರೊಂದಿಗೆ ಜಗತ್ತಿನಲ್ಲಿ ಒಟ್ಟಾರೆ ಈ ಒಂದು ದಿನದಲ್ಲೇ 2,758 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ 26,826 ಮಂದಿ ಕೊರೋನಾಗೆ ಬಲಿಯಾಗಿದ್ದು 52,300 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ಸ್ಪೇನ್ ನಲ್ಲೂ ಒಂದೇ ದಿನ 569 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 4,934 ಮಂದಿ ಬಲಿಯಾಗಿದ್ದಾರೆ. ಇನ್ನು ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 96 ಸಾವಿರಕ್ಕೇರಿದ್ದು ಒಂದೇ ದಿನ 12 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಭಾರತದಲ್ಲಿ 800ರ ಗಡಿ ದಾಡಿದ ಸೋಂಕಿತರ ಸಂಖ್ಯೆ!
ಇದೇ ವೇಳೆ ಭಾರತದಲ್ಲೂ ಇಂದು ಹೊಸದಾಗಿ 160 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 887 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಲೆ 20 ಮಂದಿ ಮೃತಪಟ್ಟಿದ್ದಾರೆ.

SCROLL FOR NEXT