ವಿದೇಶ

'ಒಗ್ಗಟ್ಟಿನಿಂದ ಹೋರಾಡಿ' ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಕರೆ

Manjula VN

ಜಿನೆವಾ: ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ.

ಕೋವಿಡ್ -19 ವಿರುದ್ಧದ ಹೋರಾಟದ ಕುರಿತು ಜಿ20 ನಾಯಕರ ವಿಶೇಷ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಈ ಸಮಯದ ಆರೋಗ್ಯ ಸಂಕಷ್ಟವನ್ನು ಎದುರಿಸಲು ಎಲ್ಲರೂ ಒಟ್ಟಾಗಬೇಕು. ಈಗ ನಾವು, ಅವಕಾಶ ನೀಡಿದರೆ, ನಮ್ಮನ್ನು ಹರಿದು ಎಸೆಯುವ ಬೆದರಿಕೆ ಹಾಕುತ್ತಿರುವ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.

ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದಕ್ಕೆ ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಾಗಿ, ಹೋರಾಡಬೇಕು. ಈ ಸಂಬಂಧ ಜಾಗತಿಕ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಸಲಹೆ ನೀಡಿದರು.

SCROLL FOR NEXT