ವಿದೇಶ

ಕೋವಿಡ್-19 ಪೇಷೆಂಟ್ ಝೀರೋ ಬಾವಲಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದನಾ?: ಸುದ್ದಿಯ ಅಸಲಿಯತ್ತು ಹೀಗಿದೆ! 

Srinivas Rao BV

ನವದೆಹಲಿ: ಕೊರೋನಾ ವೈರಸ್ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಧ್ಯಮಗಳು ಈ ಕುರಿತು ಜನಜಾಗೃತಿ ಮೂಡಿಸುವ ನಿರಂತರ ಕೆಲಸ ಮಾಡುತ್ತಿವೆ. 

ಕೋವಿಡ್-19 ನ್ನು ಚೀನಾದಲ್ಲಿ ಮೊದಲು ಹರಡಿದ್ದು ಯಾರಿಂದ? ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಚಿಕಿತ್ಸೆ ವಿಷಯದಲ್ಲಿ ಇಡಿ ಜಗತ್ತೇ ತಲೆಕೆಡಿಸಿಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಚಿಕಿತ್ಸೆ ಏನು ಎಂಬ ಪ್ರಶ್ನೆಗೆ ಹೇಗೆ ನಿಖರ ಉತ್ತರ ಸಿಕ್ಕಿಲ್ಲವೋ ಹಾಗೆಯೇ ಮೊದಲು ಹರಡಿದ್ದು ಯಾರಿಂದ ಎಂಬುದಕ್ಕೂ ಉತ್ತರ ಸಿಕ್ಕಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ.  

ಇತ್ತೀಚೆಗೆ ಪೇಷೆಂಟ್ ಝೀರೋ ಎಂಬ ಹೆಸರಿನ ತಲೆ ಬರಹದಲ್ಲಿ ಅತ್ಯಂತ ಗಾಬರಿ ಮೂಡಿಸುವ, ಅಸಹ್ಯಕರ ಸುದ್ದಿಯೊಂದು ವೈರಲ್ ಆಗಿತ್ತು. ಅದೇನೆಂದರೆ ಕೋವಿಡ್-19 ಪೇಷೆಂಟ್ ಝೀರೋ ಬಾವಲಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬುದು. 

ಈ ಸುಳ್ಳು ಸುದ್ದಿಯನ್ನು ನಿಜದ ತಲೆ ಮೇಲೆ ಹೊಡೆದಂತೆ ಪ್ರಕಟಿಸಲಾಗಿತ್ತು. ಹುಬೆ ಪ್ರಾಂತ್ಯದ 24 ವರ್ಷದ ವ್ಯಕ್ತಿ ಬಾವುಲಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಈತನೇ ಕೊರೋನಾ ವೈರಸ್ ನ್ನು ಹರಡಿದ ಮೊದಲ ರೋಗಿ ಪೇಷೆಂಟ್ ಝೀರೋ ಎಂದು ಸುದ್ದಿಯಲ್ಲಿ ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲದೇ ಈ ವ್ಯಕ್ತಿ ಬಾವಲಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಆತನ ತಂದೆ ಅವಮಾನದಿಂದ ತಲೆತಗ್ಗಿಸಿದ್ದಾರೆ ಎಂದೂ ಹೇಳಲಾಗಿತ್ತು. 

ಈ ಭಯಂಕರ ಸುದ್ದಿಯನ್ನು ಫೇಕ್ ನ್ಯೂಸ್ ತಯಾರಿಕೆ ಮಾಡುವ ವರ್ಲ್ಡ್ ನ್ಯೂಸ್ ಡೈಲಿ ಎಂಬ ವೆಬ್ ಸೈಟ್ ಪ್ರಕಟಿಸಿತ್ತು. ಆದರೆ ಇದು ಸುಳ್ಳು ಎಂಬುದು ಈಗ ಸಾಬೀತಾಗಿದೆ.

SCROLL FOR NEXT