ವಿದೇಶ

ಕೋವಿಡ್-19: ನೇಪಾಳದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್, ಏ. 7ರವರೆಗೂ ಲಾಕ್ ಡೌನ್ ವಿಸ್ತರಣೆ

Nagaraja AB

ಕಠ್ಮಂಡು: ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಲಾಕ್ ಡೌನ್ ನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ. ಕಳೆದ ವಾರದಿಂದ ಜಾರಿಗೊಳಿಸಿರುವ ಲಾಕ್ ಡೌನ್ ಏಪ್ರಿಲ್ 7ರವರೆಗೂ ಮುಂದುವರೆಯಲಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಏಪ್ರಿಲ್ 7ರವರೆಗೂ ವ್ಯಾಪಾರ ವಹಿವಾಟು, ಸಾರಿಗೆ ಸಂಚಾರ ಸ್ಥಗಿತಗೊಳ್ಳಲಿದೆ. ಏಪ್ರಿಲ್ 15ರವರೆಗೂ ವಿಮಾನಯಾನ ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.ನೇಪಾಳದಲ್ಲಿ ಸಿಲುಕಿರುವ ಅಮೆರಿಕಾ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ಮಂಗಳವಾರ ವಿಮಾನವೊಂದನ್ನು ವ್ಯವಸ್ಥೆ ಮಾಡಲಾಗಿದೆ. ಆಸ್ಟ್ರೇಲಿಯಾದ ಪ್ರಯಾಣಿಕರನ್ನು ಸಿಡ್ನಿಗೆ ಕಳುಹಿಸಲು ಬುಧವಾರ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ. 

ಮನೆ ಬಾಡಿಗೆ, ಶಾಲೆ ಶುಲ್ಕವನ್ನು ಒಂದು ತಿಂಗಳವರೆಗೂ ಮನ್ನಾ ಮಾಡಿರುವ ಸರ್ಕಾರ, ಮದ್ಯ, ಲಕ್ಸುರಿ ವಾಹನ ಹಾಗೂ ಚಿನ್ನದ ಆಮದನ್ನು ನಿಷೇಧಿಸಿದೆ. ನೇಪಾಳದಲ್ಲಿ ಈವರೆಗೂ ಐದು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಓರ್ವ ವ್ಯಕ್ತಿ ಗುಣಮುಖರಾಗಿದ್ದಾರೆ. 

SCROLL FOR NEXT