ವಿದೇಶ

ಇಸ್ರೇಲ್ ಪ್ರಧಾನಿಗೂ ಕೊರೋನಾ ವೈರಸ್ ಭೀತಿ, ಸ್ವಯಂ ದಿಗ್ಭಂಧನ ಹೇರಿಕೊಂಡ ನೆತಾನ್ಯಹು

Srinivasamurthy VN

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೂ ಕೊರೋನಾ ವೈರಸ್ ಭೀತಿ ಅವರಿಸಿದ್ದು, ಅವರ ಅಧಿಕಾರಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಪರಿಣಾಮ ನೆತಾನ್ಯಹು ಅವರು ಸ್ವಯಂ ದಿಗ್ಭಂಧನದ ಮೊರೆ ಹೋಗಿದ್ದಾರೆ.

ನೆತಾನ್ಯಹು ಅವರ ಆಪ್ತ ಮತ್ತು ಇಸ್ರೇಲ್ ನ ನೆಸ್ಸೆಟ್ ವ್ಯವಹಾರಗಳ ಅಧಿಕಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ನಿಕಟ ಸಂಪರ್ಕದಲ್ಲಿದ್ದರಿಂದ ನೆತಾನ್ಯಹು ಅವರಿಗೂ ಸೋಂಕು ತಗುಲಿರುವ ಶಂಕೆ ಮೇರೆಗೆ ಅವರು ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ. ಈ  ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನೆತಾನ್ಯಹು ಕಚೇರಿ ವೈದ್ಯಕೀಯ ತಪಾಸಣಾ ವರದಿ ಬರುವ ಮುನ್ನವೇ ಅವರು ಮುಂಜಾಗ್ರತಾ ಕ್ರಮವಾಗಿ ಅವರೇ ಸ್ವಯಂ ದಿಗ್ಬಂಧನದಲ್ಲಿದ್ದಾರೆ ಎಂದು ಹೇಳಿದೆ.

ಇನ್ನು ಇಸ್ರೇಲ್ ನಲ್ಲೂ ಮಾರಕ ಕೊರೋನಾ ವೈರಸ್ ಮರಣ ಮುಂದುವರೆದಿದ್ದು, 4,347 ಮಂದಿ ಕೊರೋನಾ ಸೋಂಕಿತರಾಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 95 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದು, 134 ಮಂದಿ ಗುಣಮುಖರಾಗಿದ್ದಾರೆ. ಈ ಹಿಂದೆ ಇಟಲಿಯಲ್ಲಿ ಓರ್ವ ಇಸ್ರೇಲ್ ಪ್ರವಾಸಿಗ ಸಾವನ್ನಪ್ಪಿದ್ದ.

SCROLL FOR NEXT