ಏಂಜಲಿನಾ ಫ್ರೀಡ್ಮನ್ 
ವಿದೇಶ

1918ರ ಸ್ಪ್ಯಾನಿಷ್ ಫ್ಲೂ ನಿಂದ ತಪ್ಪಿಸಿಕೊಂಡು, ಕ್ಯಾನ್ಸರ್ ಗೆದ್ದು, ಕೊರೋನಾಗೆ ಸೆಡ್ಡು ಹೊಡೆದ 101 ವರ್ಷದ ಅಜ್ಜಿ!

ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ. ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೊಹಗೇನ್ ಲೇಕ್: ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ.

ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಗೆ ಕೊರೋನಾ ಪಾಸಿಟಿವ್ ಇದ್ದ ಕಾರಣ ಪರೀಕ್ಷೆ ಮುಂದೂಡವಾಯಿತು.

ಹಲವಾರು ವಾರಗಳ ಕಾಲ ಜ್ವರದಿಂದ ಬಳಲಿದ್ದ ಮಹಿಳೆ ಕ್ಯಾನ್ಸರ್ ವಿರುದ್ಧವೂ ಹೋರಾಡಿದ್ದಳು.ಏಪ್ರಿಲ್ 20 ರಂದು ನಡೆಸಿದ ಟೆಸ್ಟ್ ನಲ್ಲಿ ಕೊರೋನಾ ನೆಗೆಟಿವ್ ಕಂಡು ಬಂದಿದೆ.   ನನ್ನ ತಾಯಿಯದ್ದು ಸೂಪರ್ ಹ್ಯೂಮನ್ ಡಿಎನ್ ಎ ಎಂದು ಏಂಜಲಿನಾ ಪುತ್ರಿ ಹೇಳಿದ್ದಾಳೆ.

ಏಂಜಲಿನಾ ಫ್ರೀಡ್ಮನ್ 1918 ರಲ್ಲಿ ಇಟಲಿಯಿಂದ ನ್ಯೂಯಾರ್ಕ್ ನಗರಕ್ಕೆ ವಲಸೆ ಬಂದವರನ್ನು ಪ್ರಯಾಣಿಕರ ಹಡಗಿನಲ್ಲಿ ಜನಿಸಿದರು. ಆಕೆಯ ತಾಯಿ ಹಡಗಿನಲ್ಲಿ ಜನ್ಮ ನೀಡಿ ನಿಧನರಾದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!