ವಿದೇಶ

ತಮ್ಮ ಜೀವನನ್ನು ಉಳಿಸಿದ ವೈದ್ಯರ ಹೆಸರನ್ನೇ ಮಗನಿಗಿಟ್ಟ ಬ್ರಿಟನ್ ಪ್ರಧಾನಿ ಬೋರಿಸ್!

Vishwanath S

ಲಂಡನ್: ಕೊರೊನಾ ಸೋಂಕಿಗೆ ಒಳಗಾಗಿ ಇತ್ತೀಚೆಗೆ  ಗುಣಹೊಂದಿರುವ ಬ್ರಿಟನ್  ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಮ್ಮ ವೈದ್ಯಕೀಯ ಚಿಕಿತ್ಸೆಯ ಅನುಭವಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕೋವಿದ್-19 ಸೋಂಕು ತಗುಲಿದ್ದ ತಮಗೆ ವೈದ್ಯರು ಅದ್ಬುತ ಸೇವೆಗಳನ್ನು ಕಲ್ಪಿಸಿದ್ದರು ಎಂದು ವೈದ್ಯರು ಕಲ್ಪಿಸುತ್ತಿರುವ ಸೇವೆಗಳ ಬಗ್ಗೆ ಪ್ರಶಂಸಿಸಿದ್ದಾರೆ.

ತುರ್ತು ಚಿಕಿತ್ಸಾ ಘಟಕದಲ್ಲಿ ತಮ್ಮನ್ನು ಇರಿಸಿ, ಆಗಾಗ ವೈದ್ಯಕೀಯ ಪರೀಕ್ಷೆಯಗಳನ್ನು  ನಡೆಸಿದರು, ಅವರ ಅದ್ಬುತ ಸೇವೆಯಿಂದಾಗಿ ತಾನು ಸೋಂಕಿನಿಂದ ಚೇತರಿಸಿಕೊಂಡೆ ಎಂದು ಜಾನ್ಸನ್ ಹೇಳಿದ್ದಾರೆ. 

ಮಾರ್ಚ್ 26 ರಂದು ಬ್ರಿಟನ್ ಪ್ರಧಾನಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಸುಮಾರು 20 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು. ವೈರಸ್ ನಿಂದ ಪೂರ್ಣವಾಗಿ ಚೇತರಿಸಿಕೊಂಡ ನಂತರ ಪ್ರಸ್ತುತ  ದೈನಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಇದೇ ವೇಳೆ ತಮ್ಮ ಮಗನಿಗೆ ವೈದ್ಯರ ಹೆಸರನ್ನು ಇಡುವ ಮೂಲಕ ತಮಗೆ ವೈದ್ಯ ಸೇವೆ ನೀಡಿದ ವೈದ್ಯರಿಗೆ ಜಾನ್ಸನ್ ತಮ್ಮದೇ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

SCROLL FOR NEXT