ವಿದೇಶ

ಕೊರೋನಾ ವುಹಾನ್'ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ

Manjula VN

ವಾಷಿಂಗ್ಟನ್: ಕೊರೋನಾ ವೈರಸ್ ಉಗಮ ಸ್ಥಾನ ವುಹಾನ್ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್'ನ ವೈರಾಣು ಲ್ಯಾಬ್ ಎಂದು ಹೇಳಲು ನಮ್ಮ ಬಳಿ ಸಾಕ್ಷ್ಯವಿದೆ ಎಂದು ಅಮೆರಿಕಾ ಹೇಳಿದೆ. 

ಈ ಹಿಂದೆ ಇದೇ ಮಾತನ್ನು ಟ್ರಂಪ್ ಅವರು ಹೇಳಿದ್ದು, ಈ ವಾದವನ್ನು ಇದೀಗ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಬೆಂಬಲಿಸಿದ್ದಾರೆ. 

ಅಮೆರಿಕಾದ ಎಬಿಸಿ ಸುದ್ದಿವಾಹಿನಿ ನಡೆಸಿದ್ದ ದಿನ್ ವೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಂಪಿಯೋ ಅವರು, ಕೊರೋನಾ ಚೀನಾದ ವುಹಾನ್ ಪ್ರಯೋಗಾಲಯದಿಂದ ಬಂದಿದೆ ಎಂದು ಹೇಳಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ, ವೈರಸನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ನಿಂದ ಸೋಂಕುಗೊಳಗಾಗಿದ್ದ ಪ್ರಾಣಿಯೊಂದನ್ನು ಪ್ರಯೋಗಾಲಯದಲ್ಲಿ ನಾಶ ಮಾಡಲಾಗಿದೆ. ಆ ವೇಳೆ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿದ್ದಾರೆಂದು ವರದಿಗಳು ಹೇಳುತ್ತಿವೆ. ಕೊರೋನಾ ವೈರಸ್ ಹೇಗೆ ಹರಡಿತು ಎಂಬುದರ ಬಗೆಗಿನ ಹಲವು ಸಿದ್ಧಾಂತಗಳಲ್ಲಿ ಇದೂ ಒಂದು. ಇದನ್ನು ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದ್ದಾರೆ. 

ಅಮೆರಿಕಾದ ಕೇಂದ್ರ ಗುಪ್ತದಳದ ಮಾಜಿ ಮುಖ್ಯಸ್ಥರು ಹಾಗೂ ಚೀನಾದೊಂದಿಗೆ ನಡೆಯುತ್ತಿದ್ದೆ ವ್ಯವಹಾರಗಳಲ್ಲಿ ಮುಂದಿರುತ್ತಿದ್ದ ಅಧಿಕಾರಿಗಳ ಪೈಕಿ ಪಾಂಪಿಯೋ ಅವರು ಪ್ರಮುಖರಾಗಿದ್ದಾರೆ. 

SCROLL FOR NEXT