ವಿದೇಶ

ಮಾಲಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೂವರು ಸ್ಫೋಟಕ್ಕೆ ಬಲಿ: ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ

Manjula VN

ಬಮಾಕೊ: ಮಾಲಿ ದೇಶದ ಉತ್ತರ ಭಾಗದ ಅಗ್ಯುಲೊಕ್ ಸಮೀಪ ಸುಧಾರಿತ ಸ್ಪೋಟಕ(ಐಇಡಿ) ಸ್ಫೋಟಿಸಿ ಗಸ್ತು ತಿರುಗುತ್ತಿದ್ದ ವಿಶ್ವಸಂಸ್ಥೆಯ ಮಾಲಿಯಲ್ಲಿನ ಬಹುಆಯಾಮ ಸಮಗ್ರ ಸ್ಥಿರತೆ ಮಿಷನ್‍(ಮಿನುಸ್ಮಾ) ಮಿಷನ್‍ ನ ಮೂವರು ಯೋಧರು ಮೃತಪಟ್ಟು ಇತರ ಹಲವರು ಗಾಯಗೊಂಡಿದ್ದಾರೆ.

ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಶಾಂತಿಪಾಲನಾ ಪಡೆಯ ನಾಲ್ವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಿನುಸ್ಮಾ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಯವರ ಮಾಲಿಯಲ್ಲಿನ ವಿಶೇಷ ಪ್ರತಿನಿಧಿ ಮತ್ತು ಮಿನುಸ್ಮಾ ಮುಖ್ಯಸ್ಥ ಮಹಮತ್‍ ಸಾಲೇಹ್‍ ಅನ್ನಾಡಿಫ್‍, ಮಿನುಸ್ಮಾ ಕಾರ್ಯಾಚರಣೆಗಳನ್ನು ಅಸ್ತವ್ಯಸ್ತಗೊಳಿಸಲು ಈ ಪೈಶಾಚಿಕ ಕೃತ್ಯಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.


ಈ ನಡುವೆ ಮಾಲಿಯಲ್ಲಿನ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯ ಮೇಲಿನ ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರಸ್ ಖಂಡಿಸಿದ್ದಾರೆ.

SCROLL FOR NEXT