ಐಎಂಎಫ್ 
ವಿದೇಶ

ಕೊರೋನಾ ಎಫೆಕ್ಟ್: ಭಾರತದಲ್ಲಿ ಹೂಡಿದ್ದ 16 ಬಿಲಿಯನ್ ಡಾಲರ್ ಬಂಡವಾಳ ಹಿಂಪಡೆದ ವಿದೇಶಿ ಹೂಡಿಕೆದಾರರು!

ಮಾರಕ ಕೊರೋನಾ ವೈರಸ್ ಮತ್ತು ಸತತ ಲಾಕ್ ಡೌನ್ ಪರಿಣಾಮವಾಗಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದ್ದ ಸುಮಾರು 16 ಬಿಲಿಯನ್ ಡಾಲರ್ ಬಂಡವಾಳವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ, 

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಮತ್ತು ಸತತ ಲಾಕ್ ಡೌನ್ ಪರಿಣಾಮವಾಗಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದ್ದ ಸುಮಾರು 16 ಬಿಲಿಯನ್ ಡಾಲರ್ ಬಂಡವಾಳವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ,

ಏಷ್ಯಾ ಖಂಡವೊಂದರಲ್ಲೇ ವಿದೇಶಿ ಹೂಜಿಕೆದಾರರು ಸುಮಾರು 26 ಬಿಲಿಯನ್ ಡಾಲರ್ ಹೂಡಿಕೆಯನ್ನು ಹಿಂಪಡೆದಿದ್ದು, ಈ ಪೈಕಿ ಭಾರತ ದೇಶವೊಂದರಿಂದಲೇ ಸುಮಾರು 16 ಬಿಲಿಯನ್ ಡಾಲರ್ ಹೂಡಿಕೆಯನ್ನು ವಾಪಸ್ ಪಡೆದಿದ್ದಾರೆ. ಈ ಬಗ್ಗೆ ವಿಶ್ವ ಹಣಕಾಸು ನಿಧಿ (IMF)ವರದಿ  ನೀಡಿದ್ದು, ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಭವಿಷ್ಯದಲ್ಲಿ ಉಂಟಾಗಬಹುದಾದಿ ಆರ್ಥಿಕ ಹಿನ್ನಡೆತೆಯನ್ನು ಗ್ರಹಿಸಿರುವ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಕೊರೋನಾ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು
ಇನ್ನು ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯಂತಹ ಕೊರೋನಾ ಹೊಡೆತಕ್ಕೆ ತತ್ತರಿಸಿ ಹೋಗಿರುವ ರಾಷ್ಟ್ರಗಳಲ್ಲಿ ಬಂಡವಾಳ ಹಿಂಪಡೆತ ಪ್ರಮಾಣ ಇನ್ನೂ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ವಿಶ್ವ ಹಣಕಾಸು ಸಂಸ್ಥೆ 2020ರ ಮೊದಲ ತ್ರೈಮಾಸಿಕ ವರದಿಯಲ್ಲಿ ಈ ಮಾಹಿತಿ  ನೀಡಿದೆ. ಯೂರೋಪ್ ನಲ್ಲಿ ಜಿಡಿಪಿ 4.8 ಕುಸಿದಿದ್ದು, 1995ರ ಆರ್ಥಿಕ ಹಿಂಜರಿತದ ಬಳಿಕ ಇದೇ ಮೊದಲ ಬಾರಿಗೆ ಯೂರೋಪ್ ನಲ್ಲಿ ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಯೂರೋಪ್ ಮಾತ್ರವಲ್ಲದೇ ಪ್ರಬಲ ಆರ್ಥಿಕತೆ ಹೊಂದಿರುವ ವಿಶ್ವದ ಅಗ್ರಗಣ್ಯ ದೇಶಗಳ ಆರ್ಥಿಕತೆ ಕೂಡ ನೆಲಕಚ್ಚಿವೆ.  ಆದರೆ ಭಾರತ, ಚೀನಾ ಮತ್ತು ಇಂಡೋನೇಷ್ಯಾದಲ್ಲಿ ಕುಸಿತದ ಪ್ರಮಾಣ ತಗ್ಗಿದೆ. 

ಅಂತೆಯೇ ಆರ್ಥಿಕತೆ ಪುನಶ್ಛೇತನ ಕೊರೋನಾ ಸಾಂಕ್ರಾಮಿಕದಿಂದಾಗಿ ತಾವಂದುಕೊಂಡಿದ್ದಕ್ಕಿಂತ ಇನ್ನೂ ಕಡಿಮೆ ವೇಗದಲ್ಲಿ ಆಗಬಹುದೂ ಎಂದೂ ಐಎಂಎಫ್ ಆತಂಕ ವ್ಯಕ್ತಪಡಿಸಿದೆ. ಆರ್ಥಿಕತೆ ಪುನಶ್ಛೇತನಕ್ಕೆ ಜನರಲ್ಲಿ ಭೀತಿ, ವೈರಸ್ ಸೋಂಕು ಪ್ರಸರಣ, ಸಣ್ಣ ಉದ್ದಿಮೆಗಳ ಶಾಶ್ವತ  ಸ್ಥಗಿತ, ಹೂಡಿಕೆದಾರರ ಬಂಡವಾಳ ಹಿಂತೆಗೆತ ಮತ್ತು ಸಂಸ್ಥೆಗಳ ಸ್ಥಳಾಂತರ ಅಡ್ಡಿಯಾಗಬಹುದು. ಪ್ರಮುಖವಾಗಿ ವಿಮಾನ ಸೇವೆ ಮತ್ತು ಇತರೆ ಸಾರಿಗೆ ಸ್ಥಗಿತ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪರಿಸ್ಥಿತಿ ಸಹಜಸ್ಥಿತಿಗೆ ಮರಳಲು ವರ್ಷಗಳೇ ಬೇಕು ಎಂದು ಐಎಂಎಫ್  ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT