ವಿದೇಶ

ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: 1 ಲಕ್ಷ ಗಡಿ ದಾಟಿದ ಸಾವಿನ ಸಂಖ್ಯೆ

Manjula VN

ವಾಷಿಂಗ್ಟನ್: ವಿಶ್ವದಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕಾ ಮತ್ತೊಂದು ಕುಖ್ಯಾತಿಗೆ ಪಾತ್ರವಾಗಿದೆ. ಅಮೆರಿಕಾದಲ್ಲಿ ಕೊರೋನಾಗೆ ಈ ವರೆಗೂ 1 ಲಕ್ಷ ಮಂದಿ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ಆ ರಾಷ್ಟ್ರದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿದೆ. 

ಈ ಮೂಲಕ ಲಕ್ಷದ ಗಡಿದಾಟಿದ ಮೊದಲ ರಾಷ್ಟ್ರವಾಗಿ ಅಮೆರಿಕಾ ಹೊರಹೊಮ್ಮಿದೆ. ಅಮೆರಿಕಾದಲ್ಲಿ ಫೆ.15 ರಂದು ಮೊದಲ ಕೊರೋನಾ ಸೋಂಕು ಪತ್ತೆಯಾಗಿದ್ದಾರೆ ಮಾ.1ರಂದು ಮೊದಲ ಸಾವಿ ಸಂಭವಿಸಿತ್ತು.

SCROLL FOR NEXT