ವಿದೇಶ

ಟ್ರಂಪ್ ಗೆ ಮೊದಲ ಬಾರಿ ಶಾಕ್ ನೀಡಿದ ಟ್ವೀಟರ್

Srinivas Rao BV

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣ 'ಟ್ವಿಟರ್' ಅನಿರೀಕ್ಷಿತ ಆಘಾತ ನೀಡಿದೆ. 

ಮೇಲ್ ಇನ್ ಮೂಲಕ ನಡೆಯುವ ಅಧ್ಯಕ್ಷೀಯ ಚುನಾವಣಾ ಮತದಾನ ವ್ಯವಸ್ಥೆಯ ಬಗ್ಗೆ ಟ್ರಂಪ್ ನೀಡಿದ್ದ ಎರಡು ಹೇಳಿಕೆಗಳು ಸತ್ಯಕ್ಕೆ ದೂರವಾದವು ಹಾಗೂ ದಾರಿ ತಪ್ಪಿಸುವ ರೀತಿ ಇವೆ ಎಂದು ಟ್ವೀಟರ್ ಹೇಳಿದೆ. 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲ್ ಇನ್ ಮತದಾನ ವ್ಯವಸ್ಥೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಾಡಿದ್ದ ಪೋಸ್ಟ್ ಗಳನ್ನು ಟ್ವಿಟರ್, ಇದೇ ಮೊದಲ ಬಾರಿಗೆ ಫ್ಯಾಕ್ಟ್ ಚೆಕ್ ಗೆ ಒಳಪಡಿಸಿತ್ತು. ಟ್ವೀಟರ್ ನ ಈ ನಿರ್ಣಯ ಅಮೆರಿಕಾದಲ್ಲಿ ಸಂಚಲನ ಸೃಷ್ಟಿಸಿದೆ. ಮೇಲ್-ಇನ್ ಮತದಾನ ವ್ಯವಸ್ಥೆಯಲ್ಲಿ ಮೋಸ ನಡೆಯುವುದಿಲ್ಲ ಎಂದು ಹೇಳಲಾಗದು. ಜೊತೆಗೆ ಚುನಾವಣೆಯಲ್ಲಿ ರಿಗ್ಗಿಂಗ್ ನಡೆಯುವ ಅವಕಾಶವೂ ಇದೆ ಎಂದು ಟ್ರಂಪ್ ಮಂಗಳವಾರ ಟ್ವೀಟ್ ಮಾಡಿದ್ದರು. 

ಅಮೆರಿಕದಲ್ಲಿ ಕೋವಿಡ್ -19 ಪಿಡುಗು ತೀವ್ರಗೊಂಡಿರುವ ಕಾರಣ ಅಂಚೆ ಮತದಾನ ಜಾರಿಗೆ ತರಲು ಕ್ಯಾಲಿಫೋರ್ನಿಯಾ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದರು.

SCROLL FOR NEXT