ವಿದೇಶ

ಮಾರಕ ಕೊರೋನಾ ವೈರಸ್ ಗೆ ಅಮೆರಿಕ ತತ್ತರ; 1 ಲಕ್ಷ ಗಡಿ ದಾಟಿದ ಸಾವಿನ ಸಂಖ್ಯೆ

Srinivasamurthy VN

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಅಮೆರಿಕದಲ್ಲಿ ಉಂಟಾದ ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿದ್ದು, ಆ ಮೂಲಕ ವಿಶ್ವದಲ್ಲೇ ಕೊರೋನಾ ವೈರಸ್ ಗೆ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ ರಾಷ್ಟ್ರ ಎಂಬ ಕುಖ್ಯಾತಿಗೆ ಅಮೆರಿಕ ಭಾಜನಾವಾಗಿದೆ.

ಬುಧವಾರ 99 ಸಾವಿರ ಗಡಿಯಲ್ಲಿದ್ದ ಸಾವಿನ ಸಂಖ್ಯೆ ಇಂದು 1 ಲಕ್ಷ ಗಡಿ ದಾಟಿದೆ. ಫೆಬ್ರವರಿ 29ರಂದು ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ಮೊದಲ ಸಾವು ಸಂಭವಿಸಿತ್ತು. ಇದಾದ ನಾಲ್ಕು ತಿಂಗಳೊಳಗೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಲಕ್ಷ ದಾಟಿದೆ. ಕೋವಿಡ್ ಸೋಂಕು ಹಾಗೂ  ಸಾವಿನ ಸಂಖ್ಯೆ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಜಾನ್ ಹಾಪ್‌ಕಿನ್ಸ್ ವಿಶ್ವ ವಿದ್ಯಾಲಯದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಇದುವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಮರಣ ಪ್ರಮಾಣದಲ್ಲೂ ಅಮೆರಿಕ ಅಗ್ರ ಪಟ್ಟಿಯಲ್ಲಿದ್ದು, ಅಮೆರಿಕದಲ್ಲಿ ಪ್ರತೀ 10 ಸಾವಿರ ಸೋಂಕಿತರಿಗೆ 3 ಮಂದಿ ಸೋಂಕಿತರು  ಸಾವನ್ನಪ್ಪುತ್ತಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಾಗೆಯೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಹಲವು ಸಂಶೋಧನಾ ಸಂಸ್ಥೆಗಳು ಈಗಾಗಲೇ ಮಾನವರಲ್ಲಿ ಪ್ರಯೋಗವನ್ನು ಆರಂಭಿಸಿದೆ. ಕೂಡಲೇ ಈ ಎಲ್ಲ  ಪ್ರಯತ್ನಗಳಿಗೆ ಧನಾತ್ಮಕ ಫಲಿತಾಂಶ ಸಿಗುವ ನಂಬಿಕೆಯಲ್ಲಿದೆ. ಇನ್ನೊಂದೆಡೆ ಸೋಂಕು ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

SCROLL FOR NEXT