ವಿದೇಶ

ಕೊರೋನಾ ಸೋಂಕಿನಿಂದ ಮೃತ ಅಭ್ಯರ್ಥಿ ಅಮೆರಿಕಾ ಚುನಾವಣೆಯಲ್ಲಿ ಗೆಲುವು!

Lingaraj Badiger

ವಾಷಿಂಗ್ಟನ್: ಅಮೆರಿಕಾದಲ್ಲಿ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ಮೃತಪಟ್ಟ ಅಭ್ಯರ್ಥಿ ಚುನಾವಣೆಯಲ್ಲಿ ವಿಜೇತ ಎಂದು ಘೋಷಿಸಲಾಗಿದೆ.

ಉತ್ತರ ಡಕೋಟಾದ 55 ವರ್ಷದ ರಿಪಬ್ಲಿಕನ್ ನಾಯಕ ಡೇವಿಡ್ ಆಂದಲ್ ಅಕ್ಟೋಬರ್ 5 ರಂದು ಕರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ, ರಾಜ್ಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿ ಅವರು ಮೃತಪಟ್ಟಿದ್ದರು. ಆದರೆ, ಆ ರಾಜ್ಯದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮಾತ್ರ ಅವರು ಜಯಗಳಿಸಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಡೇವಿಡ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಚಿಕಿತ್ಸೆಯ ನಂತರ ನಿಧನರಾಗಿದ್ದರು.

ಕೋವಿಡ್ -19ರಿಂದ ಡೇವಿಡ್ ಮೃತಪಟ್ಟ ತಿಂಗಳ ನಂತರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಡೇವಿಡ್ ಗೆದ್ದಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಉತ್ತರ ಡಕೋಟಾದ ಬಿಸ್ಮಾರ್ಕ್ ಪ್ರದೇಶದಲ್ಲಿ ರಿಪಬ್ಲಿಕನ್ ಪಕ್ಷದ ಡೇವಿಡ್ ಆಂದಲ್, ಡೇವ್ ನೆಹ್ರಿಂಗ್ ಸ್ಪರ್ಧಿಸಿದ್ದರು. ಜಿಲ್ಲೆಯಲ್ಲಿ ಇಬ್ಬರು ಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡುತ್ತಾರೆ. ಹಾಗಾಗಿ ಆಂದಲ್ ಪರವಾಗಿ ಶೇ 35 ರಷ್ಟು ಮತ ಚಲಾಯಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ರೈತರು, ಕಲ್ಲಿದ್ದಲು ಉದ್ಯಮಕ್ಕೆ ಸಾಕಷ್ಟು ಸೇವೆ ಸಲ್ಲಿಸಬೇಕು ಎಂದು ಪುತ್ರ ಡೇವಿಡ್ ಆಸೆ ಪಟ್ಟಿದ್ದ ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ. ಉತ್ತರ ಡಕೋಟಾದಲ್ಲಿ ಈಗ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. 

SCROLL FOR NEXT