ವಿದೇಶ

ಸೇನಾ ಮುಖ್ಯಸ್ಥ ನರವಾಣೆಗೆ ನೇಪಾಳ ಸೇನೆಯ ಜನರಲ್ ರ‍್ಯಾಂಕ್ ಗೌರವ 

Nagaraja AB

ಕಠ್ಮಂಡು:  ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂಎಂ ನರಾವಣೆಗೆ ನೇಪಾಳ ಸೇನೆಯ  ಜನರಲ್ ರ‍್ಯಾಂಕ್ ಗೌರವ ದೊರೆತಿದೆ. ಇಂದು ನಡೆದ ವಿಶೇಷ ಸಮಾರಂಭದಲ್ಲಿ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೇಪಾಳ ಸೇನೆಯ ಈ ಗೌರವವನ್ನು ನರವಾಣೆಗೆ ಪ್ರದಾನ ಮಾಡಿದರು.  ಇದು ಎರಡು ಮಿಲಿಟರಿಗಳ ನಡುವಿನ ಬಲವಾದ ಸಂಬಂಧವನ್ನು ಪ್ರತಿಬಿಂಬಿಸುವ  ದಶಕಗಳಷ್ಟು ಹಳೆಯ ಸಂಪ್ರದಾಯವಾಗಿದೆ.

ಕಠ್ಮಂಡುವಿನ ಅಧ್ಯಕ್ಷರ ಅಧಿಕೃತ ನಿವಾಸ 'ಶಿಟಲ್ ನಿವಾಸ್' ನಲ್ಲಿ ನಡೆದ ಸಮಾರಂಭದಲ್ಲಿ ನರವಾಣೆಗೆ  ಕತ್ತಿ ಮತ್ತು ಸ್ಮರಣ ಸಂಚಿಕೆ ನೀಡಿ ನೀಡಲಾಯಿತು. ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿ, ಭಾರತೀಯ ರಾಯಭಾರಿ ವಿನಯ್ ಎಂಕೆ ಕ್ವಾತ್ರಾ ಮತ್ತಿತರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಉಭಯ ಮಿಲಿಟರಿಗಳ ನಡುವಣ ದೃಢ ಸಂಬಂಧದ ಪ್ರತಿಬಿಂಬಿವಾಗಿ ಈ ಸಂಪ್ರದಾಯವನ್ನು ಮೊದಲಿಗೆ 1950 ಲ್ಲಿ ಆರಂಭಿಸಲಾಯಿತು. 1950ರಲ್ಲಿ ಜನರಲ್ ಕೆ ಎಂ ಕಾರಿಯಪ್ಪ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದಾರೆ. 

ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನೇಪಾಳ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ತಪಾ ಅವರಿಗೆ ಭಾರತೀಯ ಸೇನೆಯ ಗೌರವ ಜನರಲ್ ನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದರು.
 

SCROLL FOR NEXT