ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಈ ಬಾರಿ ಯುಎಸ್ ಕಾಂಗ್ರೆಸ್ ನಲ್ಲಿ ದಾಖಲೆ ಸಂಖ್ಯೆಯ ಮಹಿಳಾ ಪ್ರತಿನಿಧಿಗಳು!

Sumana Upadhyaya

ವಾಷಿಂಗ್ಟನ್: ಅಮೆರಿಕ ಸರ್ಕಾರದಲ್ಲಿ ಈ ಬಾರಿ ಸಾಕಷ್ಟು ಮಹಿಳಾ ಜನಪ್ರತಿನಿಧಿಗಳಿದ್ದಾರೆ. ನಿನ್ನೆ ರುಟ್ಗೆರ್ಸ್ ವಿಶ್ವವಿದ್ಯಾಲಯದ ಅಮೆರಿಕನ್ ವುಮೆನ್ ಅಂಡ್ ಪೊಲಿಟಿಕ್ಸ್(ಸಿಎಡಬ್ಲ್ಯುಪಿ) ಕೇಂದ್ರ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ ಈ ಬಾರಿ ಅಮೆರಿಕದ 117ನೇ ಕಾಂಗ್ರೆಸ್ ನಲ್ಲಿ ಡೆಮಾಕ್ರಟ್ ಪಕ್ಷದ 100 ಮಹಿಳಾ ಸೆನೆಟರ್ ಮತ್ತು 31 ರಿಪಬ್ಲಿಕನ್ ಸೇರಿ ಒಟ್ಟು 131 ಮಹಿಳಾ ಪ್ರತಿನಿಧಿಗಳಾಗಿರುತ್ತಾರೆ ಎಂದು ದ ಹಿಲ್ ವರದಿ ಮಾಡಿದೆ. 

ಕಳೆದ ವರ್ಷ 127 ಮಂದಿ ಮಹಿಳಾ ಪ್ರತಿನಿಧಿಗಳಾಗಿದ್ದರು, ಈ ವರ್ಷ ಮತ್ತೆ ಮೂವರು ಸೇರ್ಪಡೆಯಾಗಿದ್ದಾರೆ. 

ಇದುವರೆಗೆ 83 ಡೆಮಾಕ್ರಟ್ ಮತ್ತು 23 ರಿಪಬ್ಲಿಕನ್ಸ್ ಸೇರಿ 106 ಮಹಿಳಾ ಅಭ್ಯರ್ಥಿಗಳು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಗೆದ್ದು ಬಂದಿದ್ದಾರೆ. ಈಗ ಹೌಸ್ ಆಫ್ ಕಾಂಗ್ರೆಸ್ ಗೆ ಗೆದ್ದಿರುವ 102 ಮಹಿಳಾ ಪ್ರತಿನಿಧಿಗಳಿಗಿಂತ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮುಂದಿದ್ದಾರೆ. ಇನ್ನೂ 29 ಕ್ಷೇತ್ರಗಳ ಮತ ಎಣಿಕೆ ಬಾಕಿ ಇರುವುದರಿಂದ ಈ ಸಂಖ್ಯೆ ಬದಲಾಗುವ ಸಾಧ್ಯತೆಯಿದೆ.

SCROLL FOR NEXT