ವಿದೇಶ

ನವಾಜ್ ಷರೀಫ್ ಪಾಕ್ ಸೈನ್ಯದಲ್ಲಿ 'ದಂಗೆ' ಸೃಷ್ಟಿಸಲು ಪ್ರಯತ್ನಿಸುತ್ತಿರುವ 'ನರಿ': ಇಮ್ರಾನ್ ಖಾನ್

Raghavendra Adiga

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧವಾಗ್ದಾಳಿ ನಡೆಸಿದ ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ "ಅವರು ಮಿಲಿಟರಿ ಮತ್ತು ಐಎಸ್ಐ ನಾಯಕತ್ವದಲ್ಲಿ. ದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ನಡೆಸಲು ಮುಂದಾಗಿದ್ದಾರೆ. ಅವರು ಸೇನೆಯಲ್ಲಿ "ದಂಗೆ" ಸೃಷ್ಟಿಸಲು ಪ್ರಯತ್ನಿಸುತ್ತಿರುವ "ನರಿ" ಎಂದು ಬಣ್ಣಿಸಿದ್ದಾರೆ.

ಭ್ರಷ್ಟಾಚಾರದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ನಿಂದ 2017 ರಲ್ಲಿ ಅಧಿಕಾರದಿಂದ ಉಚ್ಚಾಟಿಸಲ್ಪಟ್ತ ಪಾಕಿಸ್ತಾನ ಮುಸ್ಲಿಂ ಲೀಗ್ ನ ಸರ್ವೋಚ್ಚ ನಾಯಕ ನವಾಜ್ ಶರೀಫ್ ಕಳೆದ ತಿಂಗಳು ಮೊದಲ ಬಾರಿಗೆ ಪಾಕಿಸ್ತಾನ್ ಡೆಮಾಕ್ರೆಟಿಕ್ ಮೂಮೆಂಟ್ ನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿಡಿಯೋ ಕಾನ್ಫರೆನ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು,

ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಸರ್ಕಾರವನ್ನು ಉಚ್ಚಾಟಿಸಲು ರಚಿಸಲಾದ ಪಾಕಿಸ್ತಾನ್ ಡೆಮಾಕ್ರೆಟಿಕ್ ಮೂಮೆಂಟ್ ಅಡಿಯಲ್ಲಿ ಪ್ರತಿಪಕ್ಷಗಳು ಜಂಟಿ ರ್ಯಾಲಿಯಲ್ಲಿ ಅಕ್ಟೋಬರ್ 16 ರಂದು ಷರೀಫ್ ಈ ಅಭಿಪ್ರಾಯ ನೀಡುದ್ದರು. 

ಶರೀಫ್ ಲಂಡನ್‌ನಲ್ಲಿ "ನರಿಯಂತೆ" ಕುಳಿತು ಸೈನ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರಧಾನಿ ಖಾನ್ ಹೇಳಿದ್ದಾರೆ. ಪಾಕಿಸ್ತಾನ ಸೇನೆರಾಜಕೀಯದಲ್ಲಿ ಭಾಗಿಯಾಗಿದೆ ಮತ್ತು ಸೈನ್ಯ ಮತ್ತು ಐಎಸ್‌ಐ ಮುಖ್ಯಸ್ಥರನ್ನು ಬದಲಾಯಿಸುವಂತೆ ಕರೆ ನೀಡುವ ಮೂಲಕ ಮಾಜಿ ಪ್ರಧಾನಿ "ಪಾಕಿಸ್ತಾನ ಸೇನೆಯಲ್ಲಿ ದಂಗೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ" ಎಂದು ಖಾನ್ ಹೇಳಿದರು. ಖಾನ್ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ. ನಡೆದ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ತನ್ನ 70 ವರ್ಷಕ್ಕೆ ಹೆಚ್ಚಿನ ಅವಧಿಯ ಇತಿಹಾಸವಿರುವ ಪಾಕಿಸ್ತಾನ ಸೇನೆ ಇಲ್ಲಿಯವರೆಗೆ ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಸಾಕಷ್ಟು ಶಕ್ತಿಯನ್ನು ಪ್ರದರ್ಶಿಸಿದೆ. ಆದರೆ ದೇಶದ ರಾಜಕೀಯದಲ್ಲಿ ಮಧ್ಯಪ್ರವೇಶಿಸುವುದನ್ನು ಸೇನೆಯು ನಿರಾಕರಿಸಿದೆ. 

2018 ರ ಚುನಾವಣೆಯಲ್ಲಿ ಗೆಲ್ಲಲು ಸೇನೆ ತನಗೆ ಸಹಾಯ ಮಾಡಿತ್ತು ಎನ್ನುವ ಆರೋಪವನ್ನು ಖಾನ್ ತಳ್ಳಿಹಾಕಿದ್ದಾರೆ. 

ಅನಾರೋಗ್ಯದ ನೆಪದಲ್ಲಿ ಷರೀಫ್ ದೇಶದಿಂದ ಓಡಿಹೋಗಿದ್ದಾರೆಂದ ಖಾನ್ ಅವರು "ಹಣದ ಭಕ್ತರು"ಮತ್ತು ದೇಶವನ್ನು ಲೂಟಿ ಮಾಡುವ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರು. 

ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿರುವ ಪಿಎಂಎಲ್-ಎನ್ ಮುಖ್ಯಸ್ಥರಾದ ನವಾಜ್ ಷರೀಫ್ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ಕಳೆದ ನವೆಂಬರ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಲು ನವಾಜ್ ಅವರಿಗೆ ಎಂಟು ವಾರಗಳ ಕಾಲ ಅನುಮತಿ ನೀಡಿತ್ತು. ಆದರೆ ಅವರು ಹಿಂತಿರುಗಲಿಲ್ಲ, ಆದರೆ ಅವರ ವಕೀಲರು ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸೈನ್ಯವು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಕ್ಕಾಗಿ ಖಾನ್ ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ವಿರುದ್ಧ ವಾಗ್ದಾಳಿ ನಡೆಸಿದರು. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತಿರುವುದರಿಂದ ಅವರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

"ನವಾಜ್ ಷರೀಫ್ ಮತ್ತು ಅವರ ಪುತ್ರಿ ದೇಶದಲ್ಲಿ ಪಾಕಿಸ್ತಾನ ಸೇನೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡಲಾರರು ಮತ್ತು ಅದಕ್ಕಾಗಿಯೇ ಅವರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಮರಿಯಮ್ ನವಾಜ್ ಅವರು ಮಹಿಳೆಯಾಗಿದ್ದರಿಂದ ನಾವು ಅವಳನ್ನು ಕಂಬಿಗಳ ಹಿಂದೆ ಕಳುಹಿಸುವುದಿಲ್ಲ ಎಂದು ತಿಳಿದಿರುವುದರಿಂದ, ಅವರು ಸೈನ್ಯದ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದಾರೆ, " ಎಂದು ಅವರು ಹೇಳಿದರು. ಸೈನ್ಯದ ವಿರುದ್ಧದ ಆರೋಪಗಳನ್ನು ಮಾಡಲು ಪಾಕಿಸ್ತಾನಿಗಳು ಎಂದಿಗೂ ಭ್ರಷ್ಟ ರಾಜಕಾರಣಿಗಳನ್ನು ಅನುಮತಿಸುವುದಿಲ್ಲ ಎಂದು ಖಾನ್ ಹೇಳಿದರು.
 

SCROLL FOR NEXT