ವಿದೇಶ

ಈ ರೇಸ್ ನಲ್ಲಿ ಜಯ ಗಳಿಸುವುದು ಖಂಡಿತ, ನಮಗೆ 300ಕ್ಕೂ ಹೆಚ್ಚು ಎಲೆಕ್ಟೊರಲ್ ಮತಗಳು ಸಿಗಲಿವೆ: ಜೊ ಬೈಡನ್ 

Sumana Upadhyaya

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಕಷ್ಟು ಸಂಕೀರ್ಣತೆಯಿದೆ, ಆದರೆ ನಾವು ಈ ಹೊತ್ತಿನಲ್ಲಿ ತಾಳ್ಮೆಯಿಂದ ಇರಬೇಕು. ಮತ ಎಣಿಕೆಯನ್ನು ನಿಲ್ಲಿಸಲು ಯಾರು, ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನಮಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದು ರಾಜಕೀಯದ ಉದ್ದೇಶ ದೇಶಕ್ಕಾಗಿ ಕೆಲಸ ಮಾಡುವುದಾಗಿದೆ ಎಂದು ಡೆಮಾಕ್ರಟ್ ಅಭ್ಯರ್ಥಿ, ಅಧ್ಯಕ್ಷ ಸ್ಥಾನದ ಸನಿಹದಲ್ಲಿರುವ ಜೊ ಬೈಡನ್ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ವಿರೋಧ ಪಕ್ಷದವರು, ಪ್ರತಿಸ್ಪರ್ಧಿಗಳಾಗಿರಬಹುದು ಆದರೆ ನಾವು ಶತ್ರುಗಳಲ್ಲ, ನಾವು ಕೂಡ ಅಮೆರಿಕನ್ನರು ಎಂದು ಹೇಳಿದ್ದಾರೆ. ಇದುವರೆಗೆ ಬಂದ ಎಲೆಕ್ಟೊರಲ್ ಕಾಲೇಜ್ ಮತಗಳು ಸ್ಪಷ್ಟವಾಗಿ ಹೇಳುತ್ತದೆ, ನಾವು ಈ ಸ್ಪರ್ಧೆಯಲ್ಲಿ ಜಯಗಳಿಸುತ್ತೇವೆ, ಡೆಮಾಕ್ರಟ್ ಪಕ್ಷ 300ಕ್ಕೂ ಹೆಚ್ಚು ಎಲೆಕ್ಟೊರಲ್ ಮತಗಳನ್ನು ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ನಾವು ಅಧಿಕಾರಕ್ಕೆ ಬಂದ ಕೂಡಲೇ ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತವಾಗುವುದು ನಮ್ಮ ಉದ್ದೇಶವಾಗಿದೆ ಎಂದು ಸಹ ಜೊ ಬೈಡನ್ ಹೇಳಿದರು.

SCROLL FOR NEXT