ವಿದೇಶ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯೂಸ್ ಲೆಸ್: ಮರಿಯಮ್ ನವಾಜ್

Lingaraj Badiger

ಕರಾಚಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಒಬ್ಬ "ನಿಷ್ಪ್ರಯೋಜಕ" ವ್ಯಕ್ತಿ ಮತ್ತು ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಇಲ್ಲ. "ಅನಗತ್ಯವಾಗಿ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್)ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಅವರು ವಾಗ್ದಾಳಿ ನಡೆಸಿದ್ದಾರೆ.

ಪಾಕ್ ಆಡಳಿತದಲ್ಲಿ ಇಮ್ರಾನ್ ಖಾನ್ ಪಾತ್ರ ನಿಷ್ಪ್ರಯೋಜಕವಾಗಿದೆ. ಅವರನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮರಿಯಮ್ ಆರೋಪಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಕರಾಚಿಯ ಘಟನೆಯ ಬಗ್ಗೆ ಮಾತನಾಡಿದ ಮರಿಯಮ್ ಅವರು, ನಾವಿದ್ದ ಕೋಣೆಯ ಬಾಗಿಲನ್ನು ಮುರಿದು ಹಾಕಿ ಪತಿಯನ್ನು ಬಂಧಿಸಿದ್ದರು. ಸಿಂಧ್ ಪ್ರಾಂತ್ಯದ ಐಜಿಪಿಯನ್ನು ಅಪಹರಿಸಿದ್ದರು. ಇಷ್ಟಾದರೂ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ದೇಶದಲ್ಲಿ ಏನು ನಡೆಯುತ್ತಿದ್ದ ಎಂಬುದು ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಖಾನ್ ಅವರು ಯೋಗ್ಯರು ಎಂದು ಯಾರೂ ಭಾವಿಸಿವುದಿಲ್ಲ. ಪಾಕಿಸ್ತಾನದ ಎಲ್ಲಾ ಸಮಸ್ಯೆಗಳು ಮತ್ತು ಕಾಯಿಲೆಗಳಿಗೆ ಒಂದೇ ಒಂದು ಪರಿಹಾರವಿದೆ. ಅದು ಇಮ್ರಾನ್ ಖಾನ್ ಮತ್ತು ಅವರ ನಕಲಿ ಸರ್ಕಾರವನ್ನು ಮನೆಗೆ ಕಳುಹಿಸುವುದು ಎಂದು ಪಿಎಂಎಲ್-ಎನ್ ನಾಯಕಿ ಹೇಳಿದ್ದಾರೆ.

SCROLL FOR NEXT