ವಿದೇಶ

ಜೋ ಬೈಡನ್ ವಿರುದ್ಧ ಕೊನೆಗೂ ಸೋಲೊಪ್ಪಿಕೊಳ್ಳುವ ಸುಳಿವು ನೀಡಿದ ಟ್ರಂಪ್

Srinivas Rao BV

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋಲೊಪ್ಪಿಕೊಳ್ಳುವ ಸುಳಿವು ನೀಡಿದ್ದಾರೆ. 

ಈ ವರೆಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಕೋರ್ಟ್ ಮೊರೆ ಹೋಗುವೆ ಎನ್ನುತ್ತಿದ್ದ ಟ್ರಂಪ್ ಈಗ ಕೊರೋನಾ ವೈರಸ್ ಬಗ್ಗೆ ಮಾತನಾಡುತ್ತಾ, ಭವಿಷ್ಯದಲ್ಲಿ ಏನಾಗುತ್ತದೆಯೋ? ಯಾರ ಆಡಳಿತವಿರುತ್ತದೆಯೋ ಯಾರಿಗೆ ಗೊತ್ತು, ಕಾಲವೇ ಉತ್ತರಿಸಲಿದೆ ಎಂದು ಹೇಳುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಳ್ಳುವ ಸೂಚನೆ ನೀಡಿದ್ದಾರೆ.

ಜ.20 ರಂದು ಹೊಸ ಆಡಳಿತ ಅಸ್ಥಿತ್ವಕ್ಕೆ ಬರಬಹುದು ಎಂಬುದನ್ನು ಸಾರ್ವಜನಿಕವಾಗಿ ಟ್ರಂಪ್ ಹೇಳಿಕೊಂಡಿರುವುದು ಇದೇ ಮೊದಲಾಗಿದೆ. ಟ್ರಂಪ್ ಅವರ ಕಟು ಟೀಕಾಕಾರರು ಟ್ರಂಪ್ ನಡೆಯನ್ನು ಟೀಕಿಸುತ್ತಾ, ಹಾಲಿ ಅಧ್ಯಕ್ಷ ಟ್ರಂಪ್ ಶ್ವೇತ ಭವನ ಬಿಟ್ಟು ಹೊರಡುವುದಕ್ಕೆ ಒಪ್ಪದೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ವಿಶ್ಲೇಷಿಸಿದ್ದರು.

ಟ್ರಂಪ್ ತಂಡದಲ್ಲಿರುವ ಸಹಾಯಕರೊಬ್ಬರೂ ಈ ಬಗ್ಗೆ ಸುಳಿವು ನೀಡಿದ್ದು, ಎನ್ ಬಿಸಿ ಜೊತೆ ಮಾತನಾಡುತ್ತಾ, ಚುನಾವಣೆಯಲ್ಲಿ ತಾನು ಸೋತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳದೇ ಚುನಾವಣಾ ತೀರ್ಪನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

SCROLL FOR NEXT