ವಿದೇಶ

'ನಮಗೆ ಟ್ರಂಪ್ ಬೇಕು' ಅಮೆರಿಕಾದಲ್ಲಿ ರಸ್ತೆಗಿಳಿದ ಲಕ್ಷಾಂತರ ಜನರು!

Manjula VN

ವಾಷಿಂಗ್ಟನ್: ಅಮೆರಿಕಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ, ಅಧ್ಯಕ್ಷೀಯ ಚುನಾವಣಾ ಫಲಿತಾಂಶ ವಿರೋಧಿಸಿ ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಶ್ವೇತಭವನ ಬಳಿಯ ಫ್ರೀಡಂ ಪ್ಲಾಜಾದಲ್ಲಿ ಶನಿವಾರ ಬೆಳಿಗ್ಗೆ ಲಕ್ಷಾಂತರ ಮಂದಿ ಟ್ರಂಪ್ ಬೆಂಬಲಿಗರು ಜಮಾಯಿಸಿದ್ದರು. ಆದರೆ, ಅವರು ಮಧ್ಯಾಹ್ನ ಆಯೋಜಿಸಲಾಗಿದ್ದ ವುಮೆನ್ ಫಾರ್ ಅಮೇರಿಕಾ ಫಸ್ಟ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈ ಗುಂಪಿನ ನೇತೃತ್ವವನ್ನು ಟಿ ಪಾರ್ಟಿಯ ಮಾಜಿ ಕಾರ್ಯಕರ್ತ ಆಮಿ ಕ್ರೇಮರ್ ವಹಿಸಿದ್ದರು. ಪ್ಲಾಜಾದಲ್ಲಿ 10,000 ಜನರ ಸಮಾವೇಶ ನಡೆಸಲು ಕ್ರೇಮರ್ ಶುಕ್ರವಾರ ಅನುಮತಿ ಪಡೆದಿದ್ದರೂ, ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚಿನ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಸ್ಪುಟ್ನಿಕ್ ವರದಿಯ ಪ್ರಕಾರ, ಜನ ಸಮೂಹ 'ಇನ್ನೂ ನಾಲ್ಕು ವರ್ಷಗಳು', ' ಕಳವು ನಿಲ್ಲಿಸಿ', 'ನಮಗೆ ಟ್ರಂಪ್ ಬೇಕು' ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅಧ್ಯಕ್ಷ ಟ್ರಂಪ್ ಬೆಂಬಲಿಗರಿಗೆ ಅಭಿವಂದನೆ ಸಲ್ಲಿಸಿ ತೆರಳಿದರು.

SCROLL FOR NEXT