ವಿದೇಶ

ಮಾಡರ್ನ ಕೋವಿಡ್ ಲಸಿಕೆ ಶೇ.94.5ರಷ್ಟು ಪರಿಣಾಮಕಾರಿ: ವರದಿ

Srinivasamurthy VN

ವಾಷಿಂಗ್ಟನ್: ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ಸಂಸ್ಥೆಯ ಕೋವಿಡ್ 19 ಲಸಿಕೆ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ಹೇಳಿದೆ.

ಹೌದು.. ಈ ಬಗ್ಗೆ ಅಮೆರಿಕ ಮೂಲದ ಬಯೋಟೆಕ್ ದೈತ್ಯ ಸಂಸ್ಥೆ ಫಿಜರ್ ಮತ್ತು ಜರ್ಮನಿ ಮೂಲದ ಬಯೋನ್ ಟೆಕ್ ಸಂಸ್ಥೆ ಘೋಷಣೆ ಮಾಡಿದ್ದು, ತಮ್ಮ ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ಫಲಿತಾಂಶಗಳ ಅನ್ವಯ ಕೋವಿಡ್ 19 ಸೋಂಕಿತರ ಮೇಲೆ ಲಸಿಕೆ  ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಾಡರ್ನಾದ ಮುಖ್ಯ ಕಾರ್ಯನಿರ್ವಾಹಕ ಸ್ಟೀಫನ್ ಬಾನ್ಸೆಲ್, ಸಂಸ್ಥೆಯು ಕಳೆದ ಜನವರಿಯಿಂದಲೂ ಲಸಿಕೆ ಮೇಲೆ ಕೆಲಸ ಮಾಡುತ್ತಿದ್ದು, ಇಂದು ಈ ಶ್ರಮದ ಫಲ ಲಭಿಸಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗದ ಮದ್ಯಂತರ ವರದಿ ಶೇ.94.5ರಷ್ಟು  ಪರಿಣಾಮಕಾರಿಯಾಗಿದೆ. ಅಂತೆಯೇ ಮಾಡರ್ನಾ ಸಂಸ್ಥೆ ತಮ್ಮ ಲಸಿಕೆಯನ್ನು 2 ರಿಂದ 8 ಡಿಗ್ರಿ ತಾಪಮಾನದಲ್ಲಿ 30 ದಿನಗಳವರೆಗೂ ಶೇಖರಣೆ ಮಾಡಿ ಇಡಬಹುದು ಎಂದು ಹೇಳಿದೆ. 

ಸಂಸ್ಥೆಯ ಮೂಲಗಳ ಪ್ರಕಾರ ಈ ಲಸಿಕೆಯ ಮುಂದಿನ ಹಂತದ ಪ್ರಯೋಗ ಅಥವಾ ಸಂಶೋಧನೆಗಾಗಿ 30 ಸಾವಿರ ಮಂದಿ ಸ್ವಯಂ ಸೇವಕರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

SCROLL FOR NEXT