ವಿದೇಶ

ಭಾರತ-ಅಮೆರಿಕ ಬಾಂಧವ್ಯ: ಕೋವಿಡ್-19, ಆರ್ಥಿಕ ಬಲವರ್ಧನೆ, ಕಡಲು ಸುರಕ್ಷತೆ ಜೊ ಬೈಡನ್ ಆದ್ಯತೆಯ ವಿಷಯಗಳು

Sumana Upadhyaya

ವಾಷಿಂಗ್ಟನ್: ಹಂಚಿಕೆಯ ಜಾಗತಿಕ ಸವಾಲುಗಳ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಿಕಟವರ್ತಿಯಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಅಮೆರಿಕ ಚುನಾಯಿತ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.

ಸದ್ಯ ಕೋವಿಡ್-19 ಜಾಗತಿಕ ಸಮಸ್ಯೆಯಾಗಿದ್ದು ಅದಕ್ಕೆ ಸಂಬಂಧಪಟ್ಟಂತೆ, ಜಾಗತಿಕ ಆರ್ಥಿಕ ಪುನಶ್ಚೇತನ ಮತ್ತು ಸುರಕ್ಷಿತ ಮತ್ತು ಸಮೃದ್ಧ ಇಂಡೊ-ಫೆಸಿಫಿಕ್ ಪ್ರದೇಶಗಳ ನಿರ್ವಹಣೆಗೆ ಭಾರತದ ಜೊತೆ ಕೆಲಸ ಮಾಡಲು ಮುಂದಾಗುವುದಾಗಿ ಹೇಳಿದ್ದಾರೆ.

ನವೆಂಬರ್ 3ರ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾಯಿತ ಅಧ್ಯಕ್ಷ ಜೊ ಬೈಡನ್ ಮೊದಲ ಮಾತುಕತೆಯನ್ನು ದೂರವಾಣಿ ಮೂಲಕ ನಡೆಸಿದ್ದು ಅದರಲ್ಲಿ ಇಬ್ಬರೂ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಮೆರಿಕದಲ್ಲಿ ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ತಮ್ಮ ಹೊಸ ಕಲ್ಪನೆಗಳು, ಕೆಲಸಗಳ ಆದ್ಯತೆಗಳಿಗೆ ಪರಿವರ್ತನೆ ಎಂದೇ ಹೆಸರಿಟ್ಟಿದ್ದಾರೆ.

ಅದರ ಪ್ರಕಾರ, ಕೋವಿಡ್-19 ವಿರುದ್ಧ ಹೋರಾಟ, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗಬಹುದಾಗ ಆರೋಗ್ಯ ಸಮಸ್ಯೆ, ಹವಾಮಾನ ಬದಲಾವಣೆಯನ್ನು ಎದುರಿಸುವುದು, ಜಾಗತಿಕ ಆರ್ಥಿಕ ಪುನಶ್ಚೇತನ, ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ಇಂಡೊ-ಫೆಸಿಫಿಕ್ ಪ್ರದೇಶಗಳ ಸಮೃದ್ಧತೆ ಮತ್ತು ರಕ್ಷಣೆಗೆ ಕೆಲಸ ಮಾಡಲು ಭಾರತದ ಜೊತೆ ಹತ್ತಿರದಿಂದ ಕೆಲಸ ಮಾಡಲು ಇದಿರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಅಮೆರಿಕ-ಭಾರತ ಕಾರ್ಯತಂತ್ರ ಸಹಭಾಗಿತ್ವವನ್ನು ಬಲಪಡಿಸಿ ವಿಸ್ತರಿಸಲು ತಮಗೆ ಇಚ್ಛೆಯಿದೆ ಎಂದು ಪ್ರಧಾನಿ ಮೋದಿ ಜೊತೆ ಮಾತನಾಡುವಾಗ ಜೊ ಬೈಡನ್ ಹೇಳಿದ್ದಾರೆ. ಪ್ರಧಾನಿ ಮೋದಿ ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಸಹ ಅಭಿನಂದನೆ ಸಲ್ಲಿಸಿದ್ದಾರೆ. 

SCROLL FOR NEXT