ವಿದೇಶ

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಕರೆ ನೀಡಿದ ಭಾರತ, ಯುಎನ್ ಎಸ್ ಸಿ ಕ್ರಮಕ್ಕೆ ಒತ್ತಾಯ

Nagaraja AB

ನ್ಯೂಯಾರ್ಕ್:  ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ.

ಅಪ್ಘಾನಿಸ್ತಾನದ ಶಾಂತಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಯುದ್ಧ ಪೀಡಿತ ದೇಶದಲ್ಲಿ ತಕ್ಷಣ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಕರೆ ನೀಡಿದರು.

ಅಪ್ಘಾನಿಸ್ತಾನ ಇಂದು ಪ್ರಮುಖ ತಿರುವಿನಲ್ಲಿದ್ದು ಅಂತಾರಾಷ್ಟ್ರೀಯ ಸಮುದಾಯ ಅದರಲ್ಲೂ ಭದ್ರತಾ ಪರಿಷತ್ ಸಂಬಂಧಪಟ್ಟವರಿಗೆ ಸರಿಯಾದ ಸಂದೇಶ ರವಾನಿಸುವ ಅಗತ್ಯವಿದೆ. ಭದ್ರತಾ ಪರಿಷತ್  ಹಿಂಸಾಚಾರ ಮತ್ತು ಭದ್ರತಾ ಪಡೆಗಳ ದುರ್ಬಳಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

SCROLL FOR NEXT